ಪ್ರಚೋದನಕಾರಿ ಭಾಷಣದ ಆರೋಪ ➤ ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ವಿರುದ್ಧ ಕಡಬ ತಾಲೂಕು ಹಿಂಜಾವೇ ವತಿಯಿಂದ ದೂರು

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಪ್ರಚೋದನಕಾರಿ ಭಾಷಣೆ ಮಾಡಿದ ಆರೋಪದಲ್ಲಿ ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಡಬ ಠಾಣೆಗೆ ದೂರು‌ ನೀಡಲಾಯಿತು.

ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ದೂರು ನೀಡಲಾಗಿದ್ದು, ಈ ಸಂದರ್ಭದಲ್ಲಿ ಕಡಬ ತಾಲೂಕು ಹಿಂಜಾವೇ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಕುಂತೂರು, ಕಾರ್ಯದರ್ಶಿಗಳಾದ ಜಿನಿತ್ ಮರ್ಧಾಳ, ಹರೀಶ್ ಆಲಂಕಾರು, ನಿಧಿ ಪ್ರಮುಖ್ ದೇವಿಪ್ರಸಾದ್ ಕುತ್ಯಾಡಿ, ಸಂಪರ್ಕ ಪ್ರಮುಖ್ ನಿತ್ಯಾನಂದ ಮೇಲ್ಮನೆ, ಸತೀಶ್ ರೈ, ಸುರೇಶ್, ಲಿಖಿತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.

 

Scroll to Top