ಕಡಬ: ವಿಕಲಚೇತನ ವ್ಯಕ್ತಿಗೆ ವ್ಹೀಲ್ ಚಯರ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಫೆ. 07. ಕೊಯಿಲ ಗ್ರಾಮದ ಸನ್ಯಾಸಿಮೂಲೆ ನಿವಾಸಿ ವಿಕಚೇತನ ವ್ಯಕ್ತಿ ಇಸ್ಮಾಯಿಲ್ ಎಂಬವರಿಗೆ ಬೆಂಗಳೂರಿನ ಉದ್ಯಮಿಯೋರ್ವರು ನೀಡಿದ ವ್ಹೀಲ್ ಚಯರ್ ಒಂದನ್ನು ಹಸ್ತಾಂತರಿಸಲಾಯಿತು.

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ನಝೀರ್ ಪೂರಿಂಗ ಅವರ ಮನವಿಯಂತೆ ಉದ್ಯಮಿ, ಕಾಂಗ್ರೆಸ್ ಮುಖಂಡ ಬೆಂಗಳೂರಿನ ಎನ್.ಅಬ್ದುಲ್ ರಝಾಕ್ ಎಂಬವರು ಈ ಚಯರ್ ನ್ನು ನೀಡಿದ್ದಾರೆ. ಹಸ್ತಾಂತರಿಸುವ ಸಂದರ್ಭದಲ್ಲಿ ಕಡಬ ಕಾಂಗ್ರೆಸ್ ಮುಖಂಡ ಹೆಚ್.ಆದಂ, ಪಕ್ಷದ ಕಾರ್ಯಕರ್ತ ಎಸ್.ಅಬ್ದುಲ್ ರಹಿಮಾನ್ ಹಾಗೂ ಎಸ್.ಪಿ ಖಲಂದರ್ ಉಪಸ್ಥಿತರಿದ್ದರು.

Scroll to Top