?ಸುಳ್ಯ: ಬೇಟೆಗೆ ತೆರಳಿದ್ದ ವೇಳೆ ಗುಂಡೇಟು – ವ್ಯಕ್ತಿಗೆ ಗಾಯ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 06. ಶಿಕಾರಿಗೆಂದು ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂರವನ್ನು ಬಂಧಿಸಿದ ಘಟನೆ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.


ಬಂದಿತರನ್ನು ರಾಧಾಕೃಷ್ಣ (48), ಗಣೇಶ್ (35) ಮತ್ತು ಮೋನಪ್ಪ (50) ಎಂದು ಗುರುತಿಸಲಾಗಿದೆ. ಗುರುವಾರದಂದು ರಾತ್ರಿ ವೇಳೆ ಅರಂತೋಡು ಬಳಿಯ ಪೂಮಲೆ ಬೆಟ್ಟದಲ್ಲಿ ನಾಲ್ವರು ಶಿಕಾರಿಗೆ ತೆರಳಿದ್ದು, ಕಾಡಿಗೆ ತಲುಪಿದ ಬಳಿಕ ಇವರು ಹಂದಿಯನ್ನು ಅಟ್ಟಿಸಲೆಂದು ನಾಲ್ವರು ನಾಲ್ಕು ಕಡೆಗೆ ತೆರಳಿದ್ದರು. ಶಬ್ದ ಕೇಳಿಬಂದಿದ್ದ ಕಡೆಗೆ ಕಾಡು ಹಂದಿಯೆಂದು ಭಾವಿಸಿ ಇವರು ಗುಂಡು ಹಾರಿಸಿದ್ದು ಅಲ್ಲಿ ಕುಳಿತಿದ್ದ ಸತ್ಯಮೂರ್ತಿ ಎಂಬಾತನ ಮೇಲೆ ಹಲವು ಸುತ್ತುಗಳ ಗುಂಡು ಬಿದ್ದಿತ್ತು. ನಾಡಕೋವಿಯ ಗುಂಡು ಎದೆ, ತಲೆಯ ಭಾಗಕ್ಕೆ ಗುಂಡು ಬೀಳದ ಕಾರಣ ಆತ ಮೃತ್ಯುವಿನಿಂದ ಪಾರಾಗಿದ್ದಾನೆ. ಕೂಡಲೇ ಆತನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಸದ್ದಿಲ್ಲದೆ ಬಡವರ ಪಾಲಿಗೆ ವರವಾಗುತ್ತಿರುವ ಕಡಬದ ಯುವ ಉದ್ಯಮಿ ➤ ಪ್ರಚಾರದ ಹಂಗಿಲ್ಲದೆ 300 ಕುಟುಂಬಗಳಿಗೆ ಅಕ್ಕಿ ದಾನ

error: Content is protected !!
Scroll to Top