ಬಂಟ್ವಾಳ: ಮುಂದುವರಿದ ಹೂಕಳ್ಳರ ಹಾವಳಿ ➤ ಸಿಸಿಟಿವಿ ಸೆರೆಯಾದ ಕಳ್ಳತನ ದೃಶ್ಯ ವೈರಲ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 04.‌ತಾಲೂಕಿನ ವಿವಿಧ ಫ್ಲವರ್ ಸ್ಟಾಲ್ ಗಳಿಂದ ನಿರಂತರವಾಗಿ ಮಲ್ಲಿಗೆ ಹೂವಿನ ಕಳ್ಳತನ ಪ್ರಕರಣ ಮುಂದುವರಿಯುತ್ತಿದ್ದು, ಮಂಗಳವಾರದಂದು ರಾತ್ರಿ ಮೆಲ್ಕಾರಿನ ಹೂವಿನ ಅಂಗಡಿಯೊಂದರಲ್ಲಿ ಕಳ್ಳೆತನಗೈದ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.


ಬ್ರಹ್ಮರಕೂಟ್ಲು ಟೋಲ್ ಬೂತ್ ಬಳಿ ಹಾಗೂ ಬಿಸಿರೋಡ್ ಪೇಟೆಯ ಮೂರು ಅಂಗಡಿಗಳಿಂದ ಕಳ್ಳತನ ನಡೆದಿತ್ತು. ಈ ಕುರಿತು ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರಾದರೂ ಕಳ್ಳರ ಕೃತ್ಯ ಮುಂದುವರಿದಿದೆ. ಇದೀಗ ಸಿಸಿಟಿವಿ ಆಧಾರದ ಮೇಲೆ ಓರ್ವನನ್ನು ವಶಕ್ಕೆ ಪಟೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Also Read  ಪತಿಯ ಆತ್ಮಹತ್ಯೆಗೆ ಪ್ರಚೋದನೆ ➤ ಐವರ ವಿರುದ್ಧ ದೂರು ದಾಖಲಿಸಿದ ಪತ್ನಿ

error: Content is protected !!
Scroll to Top