ಉಳ್ಳಾಲ ಸಮುದ್ರತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ…!

(ನ್ಯೂಸ್ ಕಡಬ) newskadaba.com ಉಳ್ಳಾಲ‌, ಫೆ. 04. ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಇಲ್ಲಿನ ಕೋಟೆಪುರ ಸಮುದ್ರತೀರದಲ್ಲಿ ಪತ್ತೆಯಾಗಿದ್ದು, ಇದೊಂದು ಸಂಶಯಾಸ್ಪದವಾದ ಸಾವಾಗಿದೆ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಮೃತರನ್ನು ಉಳ್ಳಾಲದ ಕೋಟೆಪುರದ ಮೀನುಗಾರಿಕಾ ಬೋಟನ್ನು ತಯಾರಿಸುವ ವೃತ್ತಿ ನಡೆಸುತ್ತಿದ್ದ ಕಿನ್ಯಾ ನಿವಾಸಿ ನಿತ್ಯಾನಂದ ಭಂಡಾರಿ (40) ಎಂದು ಗುರುತಿಸಲಾಗಿದೆ. ಕೋಟೆಪುರ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರ ಪರಿಶೀಲನೆಯ ವೇಳೆ ಮೃತದೇಹದ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದೊಂದು ಸಂಶಯಾಸ್ಪದ ಸಾವಾಗಿದೆ ಎಂದು ಪ್ರಕರಣ ದಾಖಲಾಗಿದೆ.

Also Read  ತೆಕ್ಕಿಲ್ ಮನೆತನ ಒಕ್ಕೂಟದ ಸಮಿತಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ

error: Content is protected !!
Scroll to Top