ಫೆ. 21ರಿಂದ ಬಿಗ್ ಬಾಸ್ 8ನೇ ಆವೃತ್ತಿ ಆರಂಭ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 02. ಖ್ಯಾತ ಕನ್ನಡ ನಟ ಕಿಚ್ಚ ಸುದೀಪ್ ನಿರೂಪಣೆಯ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫೆಬ್ರವರಿ 21ರಿಂದ ಪ್ರಾರಂಭವಾಗಲಿದೆ.


ಇದೀಗ ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್, ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಫೆ. 21ಕ್ಕೆ ಆರಂಭಿಸಲಿದ್ದು, ರಾತ್ರಿ 9ಗಂಟೆಯಿಂದ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಮೊದಲ ಸೀಸನ್ ನಿಂದಲೇ ನಿರೂಪಕರಾಗಿರುವ ಸುದೀಪ್ ಈ ಬಾರಿಯೂ ಮುಂದುವರಿಯುತ್ತಿದ್ದಾರೆ. ಈಗಾಗಲೆ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಇನ್ನು ಈ ಬಿಗ್‌ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

Also Read  ಕಡಬದಲ್ಲೊಂದು ಮಸಾಜ್ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ➤ ಇಲ್ಲಿ ನಡೆಯುತ್ತಿದೆ ಹಸಿ ಮಾಂಸ ದಂಧೆ

error: Content is protected !!
Scroll to Top