ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ ➤ ವಶಕ್ಕೆ ಪಡೆದ 4 ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ತೀರ್ಥಹಳ್ಳಿ, ಫೆ. 02. ಕೋಳಿ ಅಂಕದ ಮೇಲೆ ದಾಳಿ ನಡೆಸಿದ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡುವಾಗ ಬೈಕ್ ಗಳು ದಾರಿ ಮಧ್ಯೆಯೇ ಸುಟ್ಟು ಭಸ್ಮವಾದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಬಳಿ ನಡೆದಿದೆ.

ಕೋಣಂದೂರಿನ ಕಾಡು ಮಾರ್ಗಗಗಳಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ವಾಹನಗಳನ್ನು ಬಿಟ್ಟು ಸ್ಥಳದಲ್ಲಿದ್ದವರೆಲ್ಲಾ ಪರಾರಿಯಾಗಿದ್ದರು. ಘಟನಾ ಸ್ಥಳದಲ್ಲಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿದ ಪೊಲೀಸರು, ಬೈಕ್ ಗಳನ್ನು ಠಾಣೆಗೆ ತಂದರೆ ಆರೋಪಿಗಳು ಅವರಾಗಿಯೇ ಬರುತ್ತಾರೆ ಎಂದುಕೊಂಡು ಬೈಕ್‌ ಗಳನ್ನ ಟಾಟಾ ಏಸ್ ವಾಹನದಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯೆ ವಾಹನದಿಂದ ಬೈಕ್‌ ಗಳು ಜಾರಿ ಕೆಳಗೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿವೆ. ನಾಲ್ಕೈದು ಬೈಕ್ ಒಮ್ಮೆಲೆ ಬಿದ್ದಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾಲ್ಕೂ ಬೈಕ್‌ಗಳು ಸುಟ್ಟು ಕರಕಲಾಗಿವೆ.

Also Read  ಕಡಬವನ್ನು ತಲ್ಲಣಗೊಳಿಸಿದ್ದ ಸ್ಟೇಟಸ್ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು

error: Content is protected !!
Scroll to Top