ನಾಳೆ (ಜ.31) ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯದ ಹಿನ್ನೆಲೆ ➤ ಸುಂಕದಕಟ್ಟೆ – ಕೊಂಬಾರು ರಸ್ತೆಗೆ ತೇಪೆ ಭಾಗ್ಯ

(ನ್ಯೂಸ್ ಕಡಬ) newskadaba.com ಕಡಬ, ಜ.30. ಸುಂಕದಕಟ್ಟೆಯಿಂದ ಕೊಂಬಾರು ಸಂಪರ್ಕ ರಸ್ತೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ತೇಪೆ ಭಾಗ್ಯ ದೊರೆತಿದೆ.

ನಾಳೆ (ಜ.31) ಭಾನುವಾರದಂದು ಕೊಂಬಾರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಇಂದು ರಸ್ತೆಗೆ ತೇಪೆ ಹಾಕಲಾಗುತ್ತಿದೆ.

Also Read  ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ‘ನರೇಗಾ’ ಗುರಿ ಸಾಧನೆ ➤ಕಡಬ ತಾಲೂಕಿಗೆ ಗುರಿ ಮೀರಿದ ಹೆಗ್ಗಳಿಕೆ

error: Content is protected !!
Scroll to Top