ಉದ್ಯಮಿಯೋರ್ವರ ಹನಿ ಟ್ರ್ಯಾಪ್..! ➤ ನಾಲ್ವರು ಆರೋಪಿಗಳ ಬಂಧನ



(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ಹನಿ ಟ್ರ್ಯಾಪ್ ಆರೋಪದ ಹಿನ್ನೆಲೆ ಖಾಸಗಿ ಸುದ್ದಿ ವಾಹಿನಿ ಮಾಲೀಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ ಘಟನ ಬೆಂಗಳೂರಿನಲ್ಲಿ ನಡೆದಿದೆ.






ಬಂಧಿತ ಆರೋಪಿಗಳನ್ನು ಖಾಸಗಿ ಸುದ್ದಿವಾಹಿನಿ ಮಾಲೀಕ ವಿರೇಶ್, ಜಾನ್ ಕೆನಡಿ, ನಿರ್ಮಲ್ ಬಾಬು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಮಾಡಿ 34 ಲಕ್ಷ ರೂ. ಲಪಟಾಯಿಸಿದ್ದು, ಬಳಿಕ ಮತ್ತೆ ಹಣ ನೀಡುವಂತೆ ಬ್ಲಾಕ್-ಮೇಲ್ ಮಾಡುತ್ತಿದ್ದರು. ಇಲ್ಲವಾದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ತಮಿಳುನಾಡು ಮೂಲದ ಶೇಖರ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.






error: Content is protected !!
Scroll to Top