(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 23. ಇಲ್ಲಿನ ನಾವೂರು ಗ್ರಾಮದ ಪರ್ಲ ಚರ್ಚ್ ನ ಒಳನುಗ್ಗಿದ ಕಳ್ಳರು ಹಣಕ್ಕಾಗಿ ತಡಕಾಡಿ ಪವಿತ್ರ ವಸ್ತುಗಳನ್ನು ಹಾನಿ ಮಾಡಿದ ಘಟನೆ ವರದಿಯಾಗಿದೆ.
ಶುಕ್ರವಾರದಂದು ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಚರ್ಚ್ ಪ್ರತಿನಿಧಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರ ದುಷ್ಕೃತ್ಯ ಚರ್ಚ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾವೂರು ಚರ್ಚ್ ರಸ್ತೆಯಲ್ಲಿದ್ದ ಬಾರ್ ಮತ್ತು ಪ್ರಾವಿಷನ್ ಸ್ಟೋರ್ ಅಂಗಡಿಗೂ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದು, ಅಲ್ಲಿಯೂ ಕಳ್ಳರಿಗೆ ಹಣ ಸಿಗದೇ ಇದ್ದಾಗ ಅಂಗಡಿಗೆ ಹಾನಿಗೈದಿದ್ದಾರೆ.