ಕುಡಿದ ಮತ್ತಿನಲ್ಲಿ ತಂದೆಯನ್ನೇ ಹೊಡೆದು ಕೊಂದ ಪಾಪಿ ಪುತ್ರ ➤ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.18. ಕುಡಿದ ಮತ್ತಿನಲ್ಲಿ ಪಾಪಿ ಪುತ್ರನೋರ್ವ ತನ್ನ ತಂದೆಯನ್ನು ಮರದ ತುಂಡಿನಿಂದ ಹೊಡೆದು ಕೊಲೆಗೈದ ಘಟನೆ ಸೋಮವಾರ ರಾತ್ರಿ ಬೆಳ್ತಂಗಡಿಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಸಮೀಪದ ಮುಂಡ್ಯೊಟ್ಟು ನಿವಾಸಿ ಶ್ರೀಧರ್ ಪೂಜಾರಿ ಎಂದು ಗುರುತಿಸಲಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಶ್ರೀಧರ ಪೂಜಾರಿಯನ್ನು ಪಾಪಿ ಪುತ್ರ ಹರೀಶ್ ಎಂಬಾತ ಕಂಠಪೂರ್ತಿ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಮರದ ತುಂಡಿನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ಸ್ಥಳೀಯರು ಆರೋಪಿಯನ್ನು ಹಿಡಿದಿಟ್ಟಿದ್ದು, ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಸುಳ್ಯ: ಕಂಟೇನರ್ ಲಾರಿ ಹಾಗೂ ಕಾರು ಢಿಕ್ಕಿ ➤ ಕಾರು ಚಾಲಕ ಮೃತ್ಯು

error: Content is protected !!
Scroll to Top