ಅಕ್ರಮ ಡಿನೋಟಿಫೈ ಆರೋಪ: ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ► ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ನೇಣು ಹಾಕುತ್ತೇನೆ: ಪುಟ್ಟಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.16. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಕ್ರಮವಾಗಿ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿದ್ದಾರೆ. ನನ್ನ ಆರೋಪ ಸುಳ್ಳು ಎಂದಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

ಅವರು ಸೋಮವಾರದಂದು ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಭೂಪಸಂದ್ರದಲ್ಲಿ 6.36 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಈ ಹಿನ್ನೆಲೆ ಎಸಿಬಿಗೆ ದೂರು ನೀಡಿದ್ದೇನೆ ಎಂದರು. ಎಸಿಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಈಗ ಎಸಿಬಿ ಹಾಗೂ ಸಿಎಂ ಯೋಗ್ಯತೆ ಗೊತ್ತಾಗುತ್ತೆ. ಮೊಕದ್ದಮೆ ದಾಖಲು ಮಾಡಿ ತನಿಖೆಯನ್ನು ಶೀಘ್ರವಾಗಿ ನಡೆಸುತ್ತಾರಾ ಎಂದು ಗೊತ್ತಾಗಲಿದೆ. ಅಲ್ಲದೆ, ನಾನು ಬಿಡುಗಡೆಗೊಳಿಸಿದ ದಾಖಲೆಗಳಲ್ಲಿ ಸತ್ಯಾಂಶವಿದೆ. ಇದು ಸುಳ್ಳಾದರೆ ವಿಧಾನಸೌಧದ ಮುಂಭಾಗ ನೇಣು ಹಾಕಿಕೊಳ್ಳುವೆ ಎಂದು ಪುಟ್ಟಸ್ವಾಮಿ ಸವಾಲು ಹಾಕಿದ್ದಾರೆ.

error: Content is protected !!
Scroll to Top