ಜ. 16ರಂದು ಕೋವಿಡ್ ಲಸಿಕೆ ವಿತರಿಸುವ ಹಿನ್ನೆಲೆ ➤ ಮಂಗಳೂರು ತಲುಪಿದ 42,500 ಕೋವಿಶೀಲ್ಡ್ ಲಸಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 14. ಜ. 16ರಿಂದ ಕೋವಿಡ್ ಲಸಿಕೆ ನೀಡಲಾಗುವುದರಿಂದ ಸೋಂಕು ವಿರೋಧಿ ಕೋವಿಶೀಲ್ಡ್ ಲಸಿಕೆಯು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ತಲುಪಿದ್ದು, ಜಿಲ್ಲಾ ಔಷಧ ಉಗ್ರಾಣದಲ್ಲಿ ದಾಸ್ತಾನಿರಿಸಲಾಗಿದೆ.

ಇದರಲ್ಲಿ ಒಟ್ಟು 42,500 ಲಸಿಕೆಗಳಿದ್ದು, ದ.ಕ. ಜಿಲ್ಲೆಗೆ 24,500, ಚಿಕ್ಕಮಗಳೂರು ಜಿಲ್ಲೆಗೆ 6,000 ಹಾಗೂ ಉಡುಪಿಗೆ 12,000 ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

Also Read  ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

error: Content is protected !!
Scroll to Top