ರಾಷ್ಟ್ರೀಯ ಮಟ್ಟದಲ್ಲಿ ಸರ್ಫಿಂಗ್ ಆಗುವ ಕಡಲ ತೀರದಲ್ಲಿ ಫಿಶ್ ಮಿಲ್ ಗಳ ಮಾಲಿನ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಸುರತ್ಕಲ್ ಬಳಿಯ ಮುಕ್ಕ ಹಾಗೂ ಸಸಿಹಿತ್ಲು ಕಡಲತೀರ ಪ್ರತಿವರ್ಷ ರಾಷ್ಟಮಟ್ಟದ ಸರ್ಫಿಂಗ್ ಸ್ಪರ್ದೆ ನಡೆಯುತ್ತಿದ್ದ ಪ್ರದೇಶ. ಅಲ್ಲಿಗೆ ದೇಶದ ವಿವಿಧ ಕಡೆಯಿಂದ ಸರ್ಫಿಂಗ್ ಪಟುಗಳು ಬರುತ್ತಾರೆ. ಆದ್ರೆ ಆ ಜಾಗದಲ್ಲಿ ಈಗ ಮೂಗು ಮುಚ್ಚಿಕೊಳ್ಳದೆ ನಿಲ್ಲೊಕಾಗಲ್ಲ. ಅಲ್ಲಿನ ಜನರು ಮನೆಯಿಂದ ಹೊರ ಬರೊಕೆ ಆಗ್ತಾಯಿಲ್ಲ. ಕಡಲ ತೀರದಲ್ಲಿ ನೀರಿಗಳಿಯಲು ಹಿಂದೆ ಮುಂದೆ ನೋಡುವಂತಾಗಿದೆ. ಯಾಕೆಂದ್ರೆ ಇಲ್ಲಿರೋ ಮೂರು ಫಿಶ್ ಮಿಲ್ ಗಳು. ಹೆಚ್.ಕೆ.ಎ ಬಾವಾ ಫಿಶ್ ಮಿಲ್, ಬಾವಾ ಫಿಶ್ ಮೀಲ್ ಸನ್ಸ್ ಮತ್ತು ಮುಕ್ಕ ಸೀಫುಡ್ ಇಂಡಸ್ಟ್ರೀಸ್. ಈ ಫಿಶ್ ಮಿಲ್ ಇರೋ ಪ್ರದೇಶದಲ್ಲಿರೋ ಸುಂದರ ಕಡಲ ತೀರದಲ್ಲಿ ಪ್ರತಿವರ್ಷ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ದೆಯನ್ನ ಆಯೋಜಿಸಲಾಗುತ್ತೆ. ಗೋವಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮಾತ್ರವಲ್ಲದೇ ವಿದೇಶಗಳಿಂದಲೂ ನೂರಾರು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸರ್ಪಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ. ಆದ್ರೆ ಈಗ ಇಲ್ಲಿನ ಪ್ರದೇಶದಲ್ಲಿ ವಿದೇಶಗಳಿಂದ ಬರುವವರಿರಲಿ ಇಲ್ಲಿನ ಸ್ಥಳೀಯರೆ ನಿಲ್ಲೊಕಾಗ್ತಾ ಇಲ್ಲ. ಮನೆಯಿಂದ ಹಗಲು ವೇಳೆಯಲ್ಲೂ ಚತ್ರಿ ಹಿಡಿದು ಬರಬೇಕಾಗುತ್ತೆ.

ಇನ್ನು ಇಲ್ಲಿ ಇರಬೇಕು ಅಂದ್ರೆ ಮೂಗು ಮುಚ್ಚಿಕೊಂಡೆ ಇರಬೇಕಾಗುತ್ತೆ. ಇದಕ್ಕೆ ಕಾರಣ ಈ ಮೂರು ಫಿಶ್ ಮಿಲ್ ಗಳು. ಈ ಪ್ರದೇಶದಲ್ಲಿ ಮೂರು ಫಿಶ್ ಮಿಲ್ ಗಳು ಇವೆ. ಪ್ರಭಾವಿಗಳಿಗೆ ಸೇರಿದ ಈ ಮೂರು ಫಿಶ್ ಮಿಲ್ ಗಳಿಂದ ಕಳೆದು ಮೂರ್ನಾಲ್ಕು ತಿಂಗಳಿಂದ ಈ ಸಮಸ್ಯೆ ಉಂಟಾಗಿದೆ. ಕರಗಿದ ಮೀನುಗಳನ್ನು ತಂದು ಇಲ್ಲಿ ಎಣ್ಣೆ ತೆಗೆಯುತ್ತಾರೆ. ಇನ್ನು ದಿನದ 24 ಗಂಟೆ ಫಿಶ್ ಮಿಲ್ ರನ್ ಮಾಡುತ್ತಾರೆ. ಇದರಿಂದ ಇಲ್ಲಿ ಮೀನಿನ ಕೊಳೆತ ವಾಸನೆಯೊ ವಾಸನೆ. ಇನ್ನು 24 ಗಂಟೆ ಕೂಡ ರನ್ ಮಾಡೋದ್ರಿಂದ ಇಲ್ಲಿನ ಸ್ಥಳೀಯರಿಗೆ ವಾಸಿಸಲು ತೊಂದರೆಯಾಗಿದೆ. ಇನ್ನು ಒಣ ಮೀನಿನ ಪುಡಿ ಗಾಳಿಯಲ್ಲಿ ಹಾರಿ ಬಂದು ಮೈಮೇಲೆ ಬೀಳೋದ್ರಿಂದ ಮನೆಯಿಂದ ಹೊರ ಹೋಗುವಾಗಿ ಆತಂಕಪಡಬೇಕಾಗಿದೆ. ಇನ್ನು ಕೇರಳದಲ್ಲಿ ಫಿಶ್ ಮಿಲ್ ಬಂದ್ ಆಗಿರೋದ್ರಿಂದ ಅಲ್ಲಿನ ಕೊಳೆತ ಮೀನುಗಳು ಕೂಡ ಇಲ್ಲಿಗೆ ಸರಬರಾಜಾಗುತ್ತಿದೆ‌. ಈ ಫಿಶ್ ಮಿಲ್ ಗಳಿಂದ ಕೆಟ್ಟ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಇದ್ರಿಂದ ಕಡಲು ಕಲುಷಿತಗೊಳ್ಳುತ್ತಿದೆ. ಇದ್ರಿಂದ ಬರೋ ಹೊಗೆಯ ಪ್ರಮಾಣ ಕೂಡ ದಟ್ಟವಾಗಿದೆ. ಇನ್ನು ಫಿಶ್ ಮಿಲ್ ಗಳಲ್ಲಿ ಬಾಯ್ಲರ್ ಬಳಸಲಾಗುತ್ತಿದೆ. ಇನ್ನು ಜನವಸತಿ ಪ್ರದೇಶದಲ್ಲಿ ಬಾಯ್ಲರ್ ಬಳಸುತ್ತಿರೋದು ಕೂಡ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ಇದೇ ಪ್ರದೇಶದಲ್ಲಿ ಒಂದು ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಅದರ ಹಾಸ್ಟೆಲ್ ಗಳು ಇರೋದ್ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಈಗ ಎಲ್ಲದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರು ಕೂಡ ಪ್ರಭಾವಿಗಳು ಅನ್ನೊ ಕಾರಣಕ್ಕೆ ಇನ್ನು ಕ್ರಮವಾಗಿಲ್ಲ. ಅಲ್ಲದೇ ಸ್ಥಳೀಯ ಕಾರ್ಪರೇಟರ್ ಈ ಬಗ್ಗೆ ಚುನಾವಣೆಗೂ ಮುನ್ನ, ಫಿಶ್ ಮಿಲ್ ನಿಂದ ಆಗುವ ಸಮಸ್ಯೆಯನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದ್ರೆ ಈಗ ಆ ವಿಚಾರದ ಬಗ್ಗೆ ನಿರ್ಲಕ್ಷ ತೋರಿ ಮೌನ ವಹಿಸಿದ್ದಾರೆ. ಇನ್ನು ಈ ಫಿಶ್ ಮಿಲ್ ಗಳು ಮಾಲೀಕರು ಸಾಕಷ್ಟು ನಿಯಮಗಳನ್ನು ಮೀರಿದ್ದಾರೆ. ಇಲ್ಲಿಗೆ ಪ್ರತಿನಿತ್ಯ ಲೋಡ್ ಗಟ್ಟಲೇ ಸೌದೆ ಬರುತ್ತಿದ್ದು ಅದಕ್ಕೂ ಕೂಡ ಅರಣ್ಯಾಧಿಕಾರಿಗಳ ಸಹಕಾರ ಇದೆ. ಇನ್ನು ಕಡಲ ಕೊರೆತ ಉಂಟಾಗಳು ಇದು ಕೂಡ ಕಾರಣವಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ದಾಖಲೆ ಸಮೇತ ಪತ್ರಿಕಾ ಮತ್ತು ಮಾದ್ಯಮ ಪ್ರಕಟಣೆ ಹೊರಡಿಸಿದ್ದೇವೆ. ಈ ಎಲ್ಲ ವಿಚಾರದ ತಮ್ಮ ಮಾದ್ಯಮದಲ್ಲಿ ಪ್ರಕಟಿಸಿ ಈ ಸಮಸ್ಯೆ ಪರಿಹಾರವಾಗಿಸಲು ಯತ್ನಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

 

error: Content is protected !!

Join the Group

Join WhatsApp Group