ರಾಜ್ಯ ನೂತನ ಸಚಿವರ ಪಟ್ಟಿ ಪ್ರಕಟ ➤ ಎಂಟಿಬಿ, ಅಂಗಾರ ಸೇರಿದಂತೆ ಏಳು ಶಾಸಕರಿಗೆ ಮಂತ್ರಿ ಸ್ಥಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 13. ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಏಳು ಶಾಸಕರ ಪಟ್ಟಿಯು ಇದೀಗ ಹೊರಬಿದ್ದಿದೆ.

ನೂತನ ಸಚಿವರಾಗಿ ಆರ್.ಶಂಕರ್, ಎಂ.ಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್. ಅಂಗಾರ, ಸಿ.ಪಿ ಯೋಗೇಶ್ವರ್ ಹಾಗೂ ಉಮೇಶ್ ಕತ್ತಿ ಮೊದಲಾದವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ‌. ಇನ್ನು ಹೆಚ್.ನಾಗೇಶ್ ಅವರನ್ನು ಕೈಬಿಟ್ಟಿದ್ದು, ರಾಜೀನಾಮೆ ನೀಡುವಂತೆ ಮನವಿ ಮಾಡಿದ್ದಾರೆ‌. ನೂತನ ಸಚಿವರೆಲ್ಲ ಇಂದು ಮಧ್ಯಾಹ್ನ 3:30ರ ನಂತರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Also Read  ಶ್ರೀ ಕಾರಿಂಜ ಸನ್ನಿಧಿಯಲ್ಲಿ ಅಪರೂಪದ ದೃಶ್ಯ ➤ ಅಂತರ ಕಾಯ್ದುಕೊಂಡು ನೈವೇದ್ಯ ಸ್ವೀಕರಿಸಿದ ವಾನರ ಸೇನೆ

error: Content is protected !!
Scroll to Top