(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ ನಾಲ್ಕು ಯುವತಿಯರನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದ ಘಟನೆ ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹಿಂದುಸ್ತಾನ್ ಲಾಡ್ಜ್ ನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಲಾಡ್ಜ್ ಮಾಲಿಕ ಮೋಹನ್, ಮ್ಯಾನೇಜರ್ ಅಬ್ದುಲ್ ರಶೀದ್, ರೂಂ ಬಾಯ್ ಉದಯ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಎಂದು ಗುರತಿಸಲಾಗಿದೆ. ವೇಶ್ಯಾವಾಟಿಕೆಗೆಂದು ಮಹಿಳೆಯರನ್ನು ಕರೆತಂದಿದ್ದ ಆರೋಪಿ ಸುನಿಲ್ ಎಂಬಾತ ಪರಾರಿಯಾಗಿದ್ದಾನೆ. ಈ ಕುರಿತಂತೆ ಪ್ರಕತಣ ದಾಖಲಾಗಿದೆ.