ಕಡಬ ತಾಲೂಕಿನ ಗ್ರಾಮಗಳ ವಿವರ ಪಂಚಮಿತ್ರ ವೆಬ್ ತಾಣದಲ್ಲಿ ಸೇರ್ಪಡೆ…!

(ನ್ಯೂಸ್ ಕಡಬ) newskadaba.com ಕಡಬ, ಜ. 09. ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಮಿತ್ರ ವೆಬ್ ತಾಣದಲ್ಲಿ ನೂತನ ಕಡಬ ತಾಲೂಕು ಕೂಡಾ ಸೇರ್ಪಡೆಯಾಗಿದೆ.


ತಾಲೂಕಿನ ನಕ್ಷೆಯ ಮೇಲೆ ಕ್ಲಿಕ್ ಮಾಡಿದಾಗ ಎಲ್ಲಾ 21 ಗ್ರಾ.ಪಂ ಗಳ ವಿವರ ಪ್ರಸ್ತುತ ಲಭ್ಯವಾಗುತ್ತಿದೆ. ಈ ವೆಬ್ ತಾಣದಲ್ಲಿ ಆಯಾ ತಾಲೂಕಿನ ನಕ್ಷೆಯ ಮೇಲೆ ಕ್ಲಿಕ್ ಮಾಡಿದ ಕೂಡಲೇ ತಾಲೂಕಿಗೆ ಸಂಬಂಧಿಸಿದ ಗ್ರಾ.ಪಂ ಗಳ ಸಂಪೂರ್ಣ ಮಾಹಿತಿ ಸಿಗಲಿದೆ.

Scroll to Top