ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೆಲಕಾಲ ಮಕ್ಕಳ ಕಳ್ಳರಾದ ಯುವ ಕಾಂಗ್ರೆಸ್ ಸದಸ್ಯರು ➤ ದೇರಳಕಟ್ಟೆಯಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಯುವಕರ ಗುಂಪೊಂದು ಸ್ಥಳೀಯ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಪ್ರಚಾರಕ್ಕೆಂದು ಮಹಮ್ಮದ್ ನಲಪಾಡ್ ಬೆಂಬಲಿಗರ ತಂಡವೊಂದು ಎರಡು ಕಾರುಗಳಲ್ಲಿ ಮಂಗಳೂರಿಗೆ ಆಗಮಿಸಿತ್ತು. ಕಾರನಲ್ಲಿದ್ದವರು ದೇರಳಕಟ್ಟೆಯ ಬೇಕರಿಯೊಂದರಲ್ಲಿ ಚಹಾ ಕುಡಿದು ಅಲ್ಲೇ ಹೊರಗಡೆ ಇದ್ದ ಮಕ್ಕಳಿಗೆ ಸಿಹಿತಿಂಡಿ ಹಂಚಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಮಗುವೊಂದು ಭಯದಿಂದ ಕಿರುಚಿದ್ದು, ತಕ್ಷಣವೇ ಸ್ಥಳೀಯರು ಜಮಾಯಿಸಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತ ಯುವಕರು ಕಾರು ಹತ್ತಿ ಪರಾರಿಯಾಗಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಯುವಕರ ಕಾರನ್ನು ಬೆನ್ನಟ್ಟಿ ಕೊಣಾಜೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಯುವಕರು ಮಕ್ಕಳ ಕಳ್ಳರಾಗಿರದೆ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹಮ್ಮದ್ ನಲಪಾಡ್ ರ ಪ್ರಚಾರಕ್ಕೆಂದು ಆಗಮಿಸಿದವರೆಂಬ ಸತ್ಯ ವಿಷಯಗಳನ್ನು ಹೊರ ಹಾಕಿದ್ದಾರೆ. ಅಲ್ಲದೇ ಕಾರಿನ ಹಿಂಭಾಗದಲ್ಲಿ ಮೊಹಮ್ಮದ್ ನಲಪ್ಪಾಡ್ ಭಾವಚಿತ್ರವಿರುವ ಪೋಸ್ಟರುಗಳು ಕಂಡು ಬಂದಿವೆ.

Also Read  ತಿರುಪತಿ: ಇಸ್ಕಾನ್ ದೇಗುಲಕ್ಕೆ ಮತ್ತೆ ಬಾಂಬ್ ಬೆದರಿಕೆ

error: Content is protected !!
Scroll to Top