ಸ್ನೇಹಿತನನ್ನೇ ಕೊಂದ ಯುವಕ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ಸ್ನೇಹಿತನನ್ನೇ ಕೊಲೆ ಮಾಡಿ ನೀರಿನ ಸಂಪ್ ನಲ್ಲಿ ಹಾಕಿರುವ ಘಟನೆ ಬೆಂಗಳೂರಿನ ಅಶೋಕ ನಗರದಲ್ಲಿ ನಡೆದಿದೆ.

 

 ಮೃತ ಯುವಕನನ್ನು ಮಿಸ್ಬಾ ಹುಸೇನ್ ಲಷ್ಕರ್ (20) ಎಂದು ಗುರುತಿಸಲಾಗಿದೆ. ಇವರಿಬ್ಬರೂ ರೂಂಮೇಟ್ ಗಳಾಗಿದ್ದು, ಇವರಿಬ್ಬರ ನಡುವೆ ಸಣ್ಣ ಜಗಳವಾಗಿ ಆತನನ್ನು ಕೊಲೆಗೈದಿದ್ದಾನೆ. ಮಿಸ್ಬಾ, ವಿಠಲ್ ಮಲ್ಯ ರಸ್ತೆಯ ಆದರ್ಶ ಡೆವಲಪರ್ಸ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಜನವರಿ 2ರಿಂದಲೂ ಈತ ನಾಪತ್ತೆಯಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪೊಯು ಪರಾರಿಯಾಗಿದ್ದು, ಆತನ ಸಿಡಿಆರ್ ಚೆಕ್ ಮಾಡಿದಾಗ ಅಸ್ಸಾಂನಲ್ಲಿರುವುದು ತಿಳಿದುಬಂದಿದೆ. ಅಲ್ಲಿನ ಪೊಲೀಸರಿಗೆ ಬೆಂಗಳೂರಿನ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಯನ್ನು ಅಸ್ಸಾಂ ನಲ್ಲಿ ಬಂಧಿಸಲಾಗಿದೆ.

Also Read  ಉಪ್ಪಿನಂಗಡಿ: ಗಂಭೀರ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿರುವ ಹಸು ➤ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರುವ ಸಾಧ್ಯತೆ

error: Content is protected !!
Scroll to Top