ವೈವಾಹಿಕ ಜಾಲತಾಣದ ಮೂಲಕ ಯುವಕರಿಗೆ ಮೋಸ ➤ ಶಿಕ್ಷಕಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 04. ವೈವಾಹಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯಿಸಿ, ಹನಿಟ್ರ್ಯಾಪ್‌ ಮಾಡಿ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಳು ಎಂಬ ಆರೋಪದಡಿಯಲ್ಲಿ  ಸಿ.ಎಸ್. ಕವಿತಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಇವರು ಸಹೋದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದ್ದು, ಬ್ಲ್ಯಾಕ್‌ಮೇಲ್ ಸಂಬಂಧ ಪ್ರೇಮ್ ಎಂಬುವರು ದೂರು ನೀಡಿದ್ದು, ತನಿಖೆ ಕೈಗೊಂಡು ಕವಿತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ವೈರಲ್ ವೀಡಿಯೋ | ದಶಕಗಳ ಹಿಂದಿನ ಸಮಾಧಿ ಅಗೆದಾಗ ಕಾದಿತ್ತು ಅಚ್ಚರಿ

 

error: Content is protected !!
Scroll to Top