(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಕಲ್ಲಪುತ್ತಿಗೆ, ರುಕ್ಮಯ ನಾಯ್ಕ ಎಡಪದವು, ವೇದಾವತಿ ಗಟ್ಟಿ ಕೊಣಾಜೆ ಉಳ್ಳಾಲ, ಪ್ರವೀಣ್ ಕುಮಾರ್ ಎಸ್. ಶಿರ್ತಾಡಿ ಹಾಗೂ ಚಂದ್ರಹಾಸ ಸನಿಲ್ ಅವರನ್ನು ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅಭಿನಂದಿಸಿದರು.
ಸಮಿತಿಯ ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಕಾರ್ಯದರ್ಶಿ ಹೆಚ್.ಸಿ.ಎಂ. ರಾಣಿ, ಸದಸ್ಯರಾದ ರಾಘವ ಶೆಟ್ಟಿ, ಜೋಯಲ್ ಡಿ’ಸೋಜ, ವಾಣಿ ಆರ್. ಶೆಟ್ಟಿ, ಪ್ರವೀಣ್ ಕುಮಾರ್, ಮುತ್ತು ಎನ್ ಶೆಟ್ಟಿ ಹಾಗೂ ಭರತೇಶ್ ಅಮೀನ್ ಉಪಸ್ಥಿತರಿದ್ದರು.