ಜ.8 ರಿಂದ 29 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ➤ ಕಡಬದಲ್ಲಿ ಯಾವಾಗ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 03. . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸ್ತುತ ಸಾಲಿನ  ಜನವರಿ ತಿಂಗಳಲ್ಲಿ ನಡೆಯುವ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರಗಳ ವಿವರ  ಇಂತಿವೆ:


ಜನವರಿ 8 ರಂದು ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಜನವರಿ 12 ರಂದು ತಾಲೂಕು ಆಸ್ಪತ್ರೆ ಬಂಟ್ವಾಳ, 15 ರಂದು ಸಾರ್ವಜನಿಕ ಆಸ್ಪತ್ರೆ ಪುತ್ತೂರು, 22 ರಂದು ಸಾರ್ವಜನಿಕ ಆಸ್ಪತ್ರೆ ಸುಳ್ಯ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, 25 ರಂದು ನಗರ ಸರ್ಕಾರಿ ಆರೋಗ್ಯ ಕೇಂದ್ರ ಉಳ್ಳಾಲ, 27 ರಂದು ಸಾರ್ವಜನಿಕ ಆಸ್ಪತ್ರೆ ಪುತ್ತೂರು, 29 ರಂದು ಸರ್ಕಾರಿ ಆರೋಗ್ಯ ಕೇಂದ್ರ ಮೂಡಬಿದ್ರೆ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರ ಕಡಬದಲ್ಲಿ ಜರಗಲಿದೆ. ಕೋವಿಡ್-19 ಶಿಷ್ಟಾಚಾರದ ಪ್ರಕಾರ ಫಲಾನುಭವಿಗಳಿಗೆ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರ ನಡೆಯುವ ಹಿಂದಿನ 72 ಗಂಟೆಯೊಳಗೆ ಆರ್.ಟಿಪಿ.ಸಿ.ಆರ್. ಟೆಸ್ಟ್ ಮಾಡಿದ ರಿಪೋರ್ಟ್ ಅನ್ನು ಕೇಸ್ ಶೀಟ್ನಲ್ಲಿ ಲಗತ್ತಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

error: Content is protected !!