ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯುತ್ತಿದ್ದ ವೇಳೆ ಢಿಕ್ಕಿ ಹೊಡೆದ ಕಾರು ➤ ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 01. ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯುತ್ತಿದ್ದ ವೇಳೆ ಎದುರಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ.

ಕಾಜರಬೈಲು ರಾ.ಹೆದ್ದಾರಿಯಲ್ಲಿ ಮುದ್ದೇಬಿಹಾಳ ಮೂಲದ ಶರಣು, ಸಿದ್ದು, ತೌಸೀಫ್ ಹಾಗೂ ಬಸವರಾಜು ಎಂಬವರು ಬರೆಯುತ್ತಿದ್ದ ವೇಳೆ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು, ಇವರ ಪೈಕಿ ಶರಣು ಹಾಗೂ ಸಿದ್ದು ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ

error: Content is protected !!
Scroll to Top