ಬಿಳಿನೆಲೆ: ಮತಗಟ್ಟೆ ಅಧಿಕಾರಿಗಳ ಎಡವಟ್ಟು ➤ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಕಡಬ, ಡಿ.27. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರಿಲ್ಲ ಎನ್ನುವ ವಿಚಾರವು ಗೊಂದಲಕ್ಕೆ ಕಾರಣವಾಯಿತು.

 

ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯ ಆವರಣದೊಳಗೆ ಬಂದು ಮತಗಟ್ಟೆ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಸುದ್ದಿ ತಿಳಿದ ಕಡಬ ತಹಸೀಲ್ದಾರ್ ಅನಂತ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು. ವಾರ್ಡ್ ವಿಂಗಡಣೆ ಸಂದರ್ಭ ಮತ ಪಟ್ಟಿ ಪರಿಷ್ಕರಣೆ ಮಾಡಿ ಕೆಲವು ಮತದಾರರ ಹೆಸರನ್ನು ಇನ್ನೊಂದು ವಾರ್ಡ್ ಗೆ ಸೇರಿಸಲಾಗಿತ್ತು. ಆದರೆ ಆ ವಿಚಾರವನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಅಧಿಕಾರಿಗಳು ವಿಫಲರಾದುದು ಗೊಂದಲಕ್ಕೆ ಕಾರಣವಾಯಿತು. ಘಟನೆಯಿಂದಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಲಾಗಿತ್ತು.

Also Read  ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್

error: Content is protected !!
Scroll to Top