ಉಡುಪಿ: ಗೀತಾ ಮಂದಿರಲ್ಲಿ ಗೀತಾಜಯಂತಿ ಉತ್ಸವ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.26: ಗೀತಾಜಯಂತಿ ಉತ್ಸವವು ಉಡುಪಿಯ ಗೀತಾಮಂದಿರದಲ್ಲಿ ವೈಭವದಿಂದ ನಡೆಯಿತು. ಪರ್ಯಾಯ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು ಹಾಗೂ ಪುತ್ತಿಗೆ ಶ್ರೀಗಳವರಾದ ಶ್ರೀ ಸುಗುಣೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.

ಈ ವೇಳೆ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶ್ರೀಗಳು ಎಲ್ಲರ ಅಂತರ್ಯಾಮಿಯಾಗಿ ಪ್ರೇರಣೆಗೈದ ಭಗವಂತ ಶ್ರೀ ಕೃಷ್ಣ ರೂಪದಿಂದ ಅನುಗ್ರಹಿಸಿದ ಸಾಧನವೇ ಭಗವದ್ಗೀತೆ ಅತೀ ಶ್ರೇಷ್ಟ ಸಾಧನೀಯ ಗ್ರಂಥ ಎಂದರು. ಪುತ್ತಿಗೆ ಶ್ರೀಗಳು ಭಗವಂತನ ಸಹಜ ಉದ್ಗಾರವೇ ಗೀತೆ. .ಸಹಜವಾಗಿದ್ದು ಸತ್ಯವಾಗಿದ್ದು ಪ್ರಾಮಾಣಿಕ ಗ್ರಂಥವಾಗಿದೆ ಕೃಷ್ಣ ಗೀತೆಯಲ್ಲಿ ಏನು ನುಡಿದ್ದಿದ್ದಾನೋ ಅದರಂತೆ ನಡೆದಿದ್ದಾನೆ. ಎಂದರು.ಡಾ ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರು ಗೀತೋಪನ್ಯಾಸ ನೀಡಿದರು. ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪರ್ಯಾಯ ಶ್ರೀಗಳು ಬಹುಮಾನ ನೀಡಿದರು. ಶ್ರೀ ಗೋಪಾಲಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಉಳ್ಳಾಲ: ಚಿನ್ನವನ್ನು ಮಹಿಳೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮರೆದ ಚಾಲಕ ಮತ್ತು ನಿರ್ವಾಹಕ

 

 

error: Content is protected !!
Scroll to Top