ಗೋಕರ್ಣ : ಬೀಚಿನಲ್ಲಿ ಕೇರಳ ಮೂಲದ ವ್ಯಕ್ತಿ ಮೃತದೇಹ ಪತ್ತೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಕುಡ್ಲೆ ಸಮುದ್ರ ತೀರದಲ್ಲಿ ಗುರುವಾರ ಕೇರಳ ಮೂಲದ ವ್ಯಕ್ತಿಯೋರ್ವದ ಶವ ಪತ್ತೆಯಾಗಿದೆ. ವಿಶ್ವನಾಥ್ ಮೋಹನದಾಸ್ (28) ಎಂದು ಗುರುತಿಸಲಾಗಿದೆ. ತಮ್ಮ ಮೂರು ಜನ ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಗೋಕರ್ಣಕ್ಕೆ ಬಂದಿದ್ದರು. ಖಾಸಗಿ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಮಾಡಿದ್ದರೆನ್ನೆಲಾಗಿದೆ.

ವಿಶ್ವನಾಥ ಬುಧವಾರ ರಾತ್ರಿಯೇ ನೀರಿಗೆ ಇಳಿದಿದ್ದು ಗೆಳೆಯರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕೇರಳಕ್ಕೆ ಕಳಿಸಿಕೊಡಲಾಗಿದೆ.

Also Read  ದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ➤ ಇಂದು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

 

error: Content is protected !!
Scroll to Top