ಸುರಕ್ಷಾದಲ್ಲಿ ದಂತ ವೈದ್ಯರ ದಿನಾಚರಣೆ ಸಂಭ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24:ಇಂದು ‘ರಾಷ್ಟ್ರೀಯ ದಂತ ವೈದ್ಯರ ದಿನ’ದ ಅಂಗವಾಗಿ ಪೂರ್ವಾಹ್ನ 10 ರಿಂದ ಸಾಯಂಕಾಲ 6 ರವರೆಗೆ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಸುರಕ್ಷಾ ದಂತ ಚಿಕಿತ್ಸಾಲಯ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಹೊಸಂಗಡಿಯ ಖ್ಯಾತ ಉದ್ಯಮಿ ಶ್ರೀ ಪೇಮ್‍ಕುಮಾರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ ಡಾ|| ಮುರಲೀಮೋಹನ್ ಚೂಂತಾರು ಇವರು ಭಾರತ ಕಂಡ ಶ್ರೇಷ್ಠ ಮತ್ತು ಮೊದಲ ದಂತ ವೈದ್ಯ ಶ್ರೀ ರಫಿಯುದ್ದೀನ್ ಅಹ್ಮದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಭಾರತ ದೇಶದಲ್ಲಿ ದಂತ ವೈದ್ಯರ ಪಿತಾಮಹ ಎಂದು ಕರೆಯಲ್ಪಡುವ ಶ್ರೀ ಡಾ|| ಆರ್. ಅಹ್ಮದ್ ಅವರು ಹಾಕಿಕೊಟ್ಟ ಆದರ್ಶ ಮತ್ತು ಮೌಲ್ಯಗಳನ್ನು ಯುವ ದಂತ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಾ|| ಚೂಂತಾರು ಅಭಿಪ್ರಾಯಪಟ್ಟರು. 1890 ರ ಡಿಸೆಂಬರ್ 24 ರಂದು ಜನಿಸಿ 1965 ರವರೆಗೆ 75 ವರ್ಷ ತುಂಬು ಸಾರ್ಥಕ ಜೀವನ ನಡೆಸಿ ಭಾರತದಲ್ಲಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಡಾ|| ಆರ್. ಅಹ್ಮದ್ ನಮಗೆಲ್ಲಾ ಅನುಕರಣೀಯ ವ್ಯಕ್ತಿತ್ವ ಎಂದು ಡಾ|| ಚೂಂತಾರು ಅಭಿಪ್ರಾಯಪಟ್ಟರು. ಅವರ ಸೇವೆಗೆ 1964ರಲ್ಲಿ ಭಾರತ ಸರಕಾರ ‘ಪದ್ಮವಿಭೂಷಣ’ ನೀಡಿ ಗೌರವಿಸಲಾಗಿತ್ತು.

Also Read  ಉಳ್ಳಾಲ: ಪ.ಜಾತಿ/ಪ.ಪಂಗಡ ಕುಂದುಕೊರತೆ ಸಭೆ

 

ಇದೇ ಸಂದರ್ಭದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ ರಮ್ಯಚೈತ್ರ, ಶ್ವೇತ ಮತ್ತು ಸುಶ್ಮಿತ ಉಪಸ್ಥಿತರಿದ್ದರು. ಸುಮಾರು 50ಕ್ಕೂ ಹೆಚ್ಚು ರೋಗಿಗಳು ಈ ಮಾಹಿತಿ ಶಿಬಿರದ ಪ್ರಯೋಜನ ಪಡೆದರು.

error: Content is protected !!
Scroll to Top