ಬಂಟ್ವಾಳ :ತೆಂಗಿನಕಾಯಿ ಮೇಲೆ ಲಿಪಿಯಲ್ಲಿ ಬರೆದ ಬರಹ ಪತ್ತೆ➤ ವಾಮಾಚಾರ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೊ ಲಿಪಿಯಲ್ಲಿ ಬರೆಯಲಾಗಿದೆ.

ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಅಭ್ಯರ್ಥಿಯೊಬ್ಬರ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಹೊಡೆದಿದ್ದು ಕಂಡುಬಂದಿದೆ. ಬಂಡಮುಗೇರು ಕ್ರಾಸ್ ನಲ್ಲಿಯೂ ಒಂದು ಯಾವುದೇ ಲಿಪಿ ಇರದ ಮಾಮೂಲಿ ತೆಂಗಿನಕಾಯಿ ಹಾಗೂ ಲಿಂಬೆ ಹುಳಿ ಒಡೆದಿರುವುದು ಕಂಡು ಬಂದಿದೆ.ನಂತರ ಚುನಾವಣೆ ದಿವಸ ಸಂಜೆ ಕಾರ್ಯಕರ್ತರೊಬ್ಬರ ಮನೆಯ ಹತ್ತಿರ ಪುನಃ ಒಂದು ತೆಂಗಿನಕಾಯಿ ಒಡೆದಿದ್ದು, ಪತ್ತೆಯಾಗಿದೆ.ಇದೀಗ ಈ ಭಾಗದಲ್ಲಿ ಆತಂಕ ವ್ಯಕ್ತವಾಗಿದೆ.

Also Read  ಕ್ವಾರೆಂಟೈನ್ ನಲ್ಲಿದ್ದ ಯೋಧ ಹೃದಯಾಘಾತದಿಂದ ಸಾವು

 

 

error: Content is protected !!
Scroll to Top