ಕರ್ನಾಟಕ ಹಾಲು ಮಹಾ ಮಂಡಳಿಯ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ “ಸಿಹಿ ಉತ್ಸವ” ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 24. ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ “ಸಿಹಿ ಉತ್ಸವ” ಯೋಜನೆಯನ್ನು ಕರ್ನಾಟಕ ರಾಜ್ಯಾದಂತ ದಿನಾಂಕ 24.12.2020ರಿಂದ 07.01.2021ರವರೆಗೆ ಆಚರಿಸುತ್ತಿದೆ.

 

ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ ಮಾರಾಟ ದರದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ನಂದಿನಿ ವಿವಿಧ ಶ್ರೇಣಿಯ ಸಿಹಿ ಉತ್ಪನ್ನಗಳು ರಾಜ್ಯಾದಂತ ಇರುವ ನಂದಿನಿ ಡೀಲರ್ ಕೇಂದ್ರಗಳಲ್ಲಿ, ನಂದಿನಿ ಪಾರ್ಲರ್/ಫ್ರಾಂಚೈಸಿಗಳಲ್ಲಿ ದೊರಕಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಹಕರಿಗೆ ಒಕ್ಕೂಟದ ವತಿಯಿಂದ “ನಂದಿನಿ ಆನ್ ವೀಲ್ಸ್” ವಾಹನದಲ್ಲೂ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. “ನಂದಿನಿ” ಗ್ರಾಹಕರ ಅಚ್ಚುಮೆಚ್ಚಿನ ಬ್ರಾಂಡ್ ಆಗಿದ್ದು, ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಒದಗಿಸುತ್ತಿದೆ. ನಂದಿನಿ ಸಿಹಿ ಉತ್ಪನ್ನಗಳ ಖರೀದಿಯೊಂದಿಗೆ ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಆಚರಿಸುವ ಮೂಲಕ ಸ್ಥಳೀಯ ಹಾಲು ಉತ್ಪಾದಕರನ್ನು ಪ್ರೊತ್ಸಾಹಿಸಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆಯವರು ಪತಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Also Read  ರಕ್ತದಾನ ಶ್ರೇಷ್ಠ ದಾನ-ಕೆ.ಎಸ್.ಬೀಳಿಗಿ

error: Content is protected !!
Scroll to Top