ಪುತ್ತೂರು :ಬಲ್ಯಾಡು ಕಾಡ್ಲ ದೈವಸ್ಥಾನದಿಂದ ಕಳವಾದ ಸೊತ್ತುಗಳು ಪತ್ತೆ ➤ ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾ

(ನ್ಯೂಸ್ ಕಡಬ) newskadaba.com ಸಂಪ್ಯ , ಡಿ.23: ಬಲ್ನಾಡು ಗ್ರಾಮದ ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ನ.10 ರಂದು ರಾತ್ರಿ ಬೆಳಕಿಗೆ ಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಠಾಣಾ ಪೊಲೀಸರು, ತನಿಖೆ ನಡೆಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಇದೀಗಾ ಕಳ್ಳತನವಾಗಿದ್ದ ದೈವದ ಆಯುಧಗಳು ಹಾಗೂ ಆಭರಣಗಳು ಪತ್ತೆಯಾಗಿದೆ.

 

ದೈವಸ್ಥಾನದಿಂದ ಸುಮಾರು 500 ಮೀಟರ್ ದೂರದಲ್ಲಿ ತರಗೆಲೆಗಳ ರಾಶಿಯಲ್ಲಿ ಪತ್ತೆಯಾಗಿದೆ.ಸ್ಥಳೀಯಮನೆಯವರು ತರಗೆಲೆ ರಾಶಿ ಮಾಡುವ ಸಂದರ್ಭದಲ್ಲಿ ದೈವಸ್ಥಾನದಿಂದ ಕಳವಾದ ದೈವದ ಎರಡು ಕಡ್ಸಲೆ ಹಾಗೂ ಬೆತ್ತಗಳು ತುಂಡು ತುಂಡಾದ ರೀತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಅವರು ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಮಾಹಿತಿ‌ ನೀಡಿದ್ದು ಪತ್ತೆಯಾದ ಸೊತ್ತುಗಳು ದೈವಸ್ಥಾನಕ್ಕೆ ಸಂಬಂಧಿಸಿರುವುದಾಗಿ ದೃಢಪಡಿಸಿದ್ದಾರೆ.

Also Read  ಪತಿಯ ಆತ್ಮಹತ್ಯೆಗೆ ಪ್ರಚೋದನೆ ➤ ಐವರ ವಿರುದ್ಧ ದೂರು ದಾಖಲಿಸಿದ ಪತ್ನಿ

ಪತ್ತೆಯಾದ ಕಡ್ಸಲೆಯಲ್ಲಿ ಬೆಳ್ಳಿಯ ಕವಚಗಳು ನ.9ರಂದು ಕಳವಾಗಿತ್ತು. ಕಾರಣಿಕ ಕ್ಷೇತ್ರವಾಗಿರುವ ಬಲ್ನಾಡು ವಿಷ್ಣುಮೂರ್ತಿ ದೈವಸ್ಥಾನದಿಂದ ನ.9ರ ರಾತ್ರಿ ಕಳ್ಳರು ದೈವಸ್ಥಾನದ ಬಾಗಿಲಿನ ಬೀಗ ಮುರಿದು ವಿಷ್ಣುಮೂರ್ತಿ ದೈವದ ಬೆಳ್ಳಿ ಕವಚ ಮಾಡಿದ ಪಟ್ಟದ ಕಡ್ಸಲೆ, ಬೆಳ್ಳಿ ಕವಚದ ಹಿಡಿಕೆ ಇರುವ ಸುರಿಯಗಳು ಹಾಗೂ ಧೂಮಾವತಿ ಕಡ್ಸಲೆ ಮೊದಲಾದವುಗಳನ್ನು ಕಳವು ಮಾಡಿದ್ದರು.ದೈವದ ಆಯುಧಗಳು ಹಾಗೂ ಆಭರಣಗಳು ಪತ್ತೆಯಾದ ಸ್ಥಳಕ್ಕೆ ಠಾಣಾ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾ ನಡೆಸುತ್ತಿದ್ದಾರೆ.

error: Content is protected !!
Scroll to Top