ಗ್ರಾಪಂ ಚುನಾವಣೆ ➤ ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಗ್ರಾಮೀಣ ಉಡುಪಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲೂ ಮತದಾನ ನಡೆದಿದೆ. ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕೋಟತಟ್ಟು ಗ್ರಾಮ ಪಂಚಾಯಿತಿ ನಿವಾಸಿಯಾಗಿದ್ದು ಮತದಾನ ಮಾಡಿದ್ದಾರೆ.ಹುಟ್ಟೂರು ಕೋಟತಟ್ಟುವಿನ ಮತಕೇಂದ್ರದಲ್ಲಿ ಪತ್ನಿ ಶಾಂತ ಹಾಗೂ ಪುತ್ರಿಯರಾದ ಸ್ವಾತಿ, ಶ್ರುತಿಯ ಜತೆ ಆಗಮಿಸಿ ಮತದಾನ ಮಾಡಿದರು.

ಈ ವೇಳೆ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆ ಅಂದರೆ ಆಳಿಸಿಕೊಳ್ಳುವವರ ಆಡಳಿತ. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಂಡರೆ ಗ್ರಾಮೀಣ ಅಭಿವೃದ್ಧಿ ಆಗಲು ಸಾಧ್ಯ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಗ್ರಾಮಾಭಿವೃದ್ಧಿ ಮಾಡೋಣ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದರು.

Also Read  ನಾಳೆ (ಜೂ.03) ಎಡಮಂಗಲದಲ್ಲಿ ನಡೆಯಬೇಕಿದ್ದ 'ಮಹಿಷಾವಧೆ' ಯಕ್ಷಗಾನ ಮುಂದೂಡಿಕೆ

error: Content is protected !!
Scroll to Top