ಕೋಡಿಂಬಾಳದಲ್ಲಿ ಪಡಿತರ ವ್ಯವಸ್ಥೆ ಶೀಘ್ರ ಆರಂಭ ➤ ಕಡಬ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 22. ತಾಲೂಕಿನ ಕೋಡಿಂಬಾಳ ಪರಿಸರದ ಜನತೆಯ ಬೇಡಿಕೆಯನುಸಾರ ಪಡಿತರ ವಿತರಣೆಯ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು, ಶೀಘ್ರವೇ ಕಾರ್ಯಾರಂಭಿಸಲಾಗುವುದು ಎಂದು ಪ್ರಾ.ಕೃ.ಪ. ಸಹಕಾರಿ ಸಂಘಧ ವಾರ್ಷಿಕ ಮಹಾಸಭೆಯಲ್ಲಿ ಕಡಬ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ತಿಳಿಸಿದ್ದಾರೆ.

   

2016ರಲ್ಲಿ ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ವೇಳೆ ಅಂದು ತಾ.ಪಂ. ಸದಸ್ಯರಾಗಿದ್ದ ಫಝಲ್ ಕೋಡಿಂಬಾಳ ಮನವಿಯಲ್ಲಿ ಚರ್ಚಿಸಿದ್ದು, ಸಭೆಯಲ್ಲಿ ನಿರ್ಣಯ ಕೈಗೊಂಡು ನಂತರದ ದಿನಗಳಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಸಂಘವು ಮುಂದಾಗಿತ್ತು. ಜನತೆಯ ಬೇಡಿಕೆಯಂತೆ ಪಡಿತರ ವ್ಯವಸ್ಥೆಯನ್ನು ಕಲ್ಪಿಸಿದರೆ ಕೋಡಿಂಬಾಳದ ಸುತ್ತಮುತ್ತಲಿನ ನಾಗರಿಕರಿಗೆ ಅನುಕೂಲವಾಗಿ, ಬಹುದಿನದ ಕನಸು ಈಡೇರಬಹುದು.

Also Read  ಕುಕ್ಕರ್ ಸ್ಫೋಟ ಪ್ರಕರಣ ➤ ಮಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಎನ್ಐಎ ದಾಳಿ

 

error: Content is protected !!
Scroll to Top