ಉಡುಪಿ : ಒಂದೇ ಕಡೆ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆ.!

(ನ್ಯೂಸ್ ಕಡಬ) newskadaba.com ಉಡುಪಿ, ಡಿ.09: ನಗರದ ಹೃದಯಭಾಗದಲ್ಲಿ ಮಂಗಳವಾರ ಒಂದೇ ಕಡೆಯಲ್ಲಿ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ಅಲ್ಲದೇ ಈ ಹಾವು ಹಿಡಿಯಲೆತ್ನಿದ ಒಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.

 

 

ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು.ಬಳಿಕ ಅಲ್ಲಿಯೇ ಹುಲ್ಲು ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಕಂಡುಬಂದಿದೆ.ವಿಷಯ ತಿಳಿದು ಸ್ಥಳಿಯ ಯುವಕರು ಸೇರಿ ಅವುಗಳನ್ನು ಹಿಡಿದು ಚೀಲದೊಳಗೆ ಹಾಕಿದರು.ಹುಲ್ಲಿನಲ್ಲಿ ಹುಡುಕಿದಾಗ ಇನ್ನೂ ಎರಡು ಮಧ್ಯಮ ಗಾತ್ರ ಹೆಬ್ಬಾವುಗಳೂ ಪತ್ತೆಯಾಗಿದ್ದು ಅವುಗಳನ್ನು ಸಹ ಹಿಡಿದು ಚೀಲಕ್ಕೆ ತುಂಬಿದರು.ಈ ಮಧ್ಯೆ ಒಂದು ಹೆಬ್ಬಾವು ಗಣೇಶ ಆಚಾರ್ಯ ಎಂಬವರಿಗೆ ಕಚ್ಚಿದ್ದು, ಹಾವಿನ ಒಂದು ಹಲ್ಲು ಮುರಿದು ಅವರ ಕೈಯಲ್ಲಿಯೇ ಉಳಿದುಬಿಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾವಿನ ಹಲ್ಲು ತೆಗೆದು ಚಿಕಿತ್ಸೆ ಕೊಡಿಸಲಾಗಿದೆ.ಒಂದು ಹಾವು 8 ಅಡಿ, 2 ಹಾವು ತಲಾ 5 ಅಡಿ ಮತ್ತು ಇನ್ನೊಂದಿ ಹಾವು 4 ಅಡಿ ಉದ್ದವಿದ್ದವು. ಸ್ಥಳೀಯ ನ್ಯಾಯವಾದಿ ಲಕ್ಷ್ಮಣ ಶೆಣೈ, ಸುಧೀರ್ ನಾಯಕ್, ರಾಜ್ ಕುಮಾರ್, ಅಶ್ವತ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Also Read  'ವಾಲ್ಮಿಕಿ- ಮುಡಾ ಹಗರಣದ ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ನಾಯಕರು'- ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ         

 

error: Content is protected !!
Scroll to Top