ಉಗ್ರ ಪರ ಗೋಡೆ ಬರಹ ಪ್ರಕರಣ ➤ ಶಾರೀಕ್ ಎಂಬಾತ ಪ್ರಮುಖ ಆರೋಪಿ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.08:  ನಗರದ ಎರಡು ಕಡೆಗಳಲ್ಲಿ ಉಗ್ರರ ಪರವಾಗಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಮಹಮ್ಮದ್ ಶಾರೀಕ್ ಎಂಬಾತನೇ ಕಿಂಗ್ ಪಿನ್ ಆರೋಪಿ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

 

ಆರೋಪಿ ಶಾರೀಕ್ ವಿದೇಶಿ ಮೂಲದ ವ್ಯಕ್ತಿಯಿಂದ ಬ್ರೈನ್ ವಾಶ್ ಗೆ ಒಳಗಾಗಿದ್ದ‌. ಮತ್ತು ಆ ಮೂಲಕ ಜನರಲ್ಲಿ ಆತಂಕ ಮೂಡಿಸುವ ಕೆಲಸ ಮಾಡಲು ಪ್ರೇರಣೆ ಪಡೆದಿದ್ದ. ಈ ಕೃತ್ಯಕ್ಕೆ ತನ್ನೂರಿನ ಸ್ನೇಹಿತ ಮಾಝ್ ಮುನೀರ್ ಅಹ್ಮದ್ ಎಂಬಾತನನ್ನೂ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಮಾಝ್ ಈ ಕೃತ್ಯಗಳಿಗೆ ಒಪ್ಪಿರಲಿಲ್ಲ. ಈ‌ ಮುಂಚೆ ಕೋರ್ಟ್ ಆವರಣದಲ್ಲಿ ಉರ್ದುವಿನಲ್ಲಿ ಇಂತಹದ್ದೇ ಬರಹ ಬರೆದಿದ್ದ. ಆದರೆ ಅದು ಯಾರ ಗಮನಕ್ಕೂ ಬಂದಿರಲಿಲ್ಲ.ಈ ಕೃತ್ಯಕ್ಕೆ ಪ್ರೇರಣೆ ನೀಡಿದ ಶಾರೀಕ್ ಸಂಬಂಧಿಯಾದ ಇನ್ನೋರ್ವ ಆರೋಪಿಯ ಬಂಧನಕ್ಕೆ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

Also Read  ಸಂಸತ್ತಿನ ಚಳಿಗಾಲದ ಅಧಿವೇಶನ : ಸಿಗರೆಟ್, ತಂಪುಪಾನೀಯದ ಮೇಲಿನ ಜಿಎಸ್ಟಿ ಶೇ.35ಕ್ಕೆ ಹೆಚ್ಚಳ ಸಂಭವ

 

error: Content is protected !!
Scroll to Top