ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದು ಖಚಿತ ➤ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್

(ನ್ಯೂಸ್ ಕಡಬ) newskadaba.com ಬೆಂಗಳೂರುಡಿ. 07: ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತೇವೆ, ಇದರಲ್ಲಿ ಅನುಮಾನವೇ ಇಲ್ಲ. ವಿಧಾನಸಭೆಯಲ್ಲಿ ಬಿಲ್ ಮಂಡನೆ ಮಾಡ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು ಯುಪಿ ಸರ್ಕಾರ ಈಗಾಗಲೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ನಾನುಕೂಡ ಅಲ್ಲಿಗೆ ತೆರಳಿ ಕಾಯ್ದೆಯ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಅಲ್ಲಿನ ಸರ್ಕಾರದ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಕರ್ನಾಟಕದಲ್ಲೂ ಕೂಡ ಗೋ ಹತ್ಯೆ ನಿಷೇಧ ಕಾಯ್ದೆ ಬಂದೇ ಬರಲಿದೆ ಎಂದು ಖಚಿತಪಡಿಸಿದ್ದಾರೆ .ಈ ಕಾನೂನನ್ನು ಎಲ್ಲರೂ ಅನುಸರಿಸಬೇಕು. ಆ ರೀತಿ ಕಾನೂನನ್ನು ಜಾರಿಗೆ ತರುತ್ತೇವೆ. ಶೀಘ್ರದಲ್ಲಿ ಸಂಪುಟದಲ್ಲಿ ಮಸೂದೆ ಮಂಡನೆಯಾಗಲಿದೆ, ಎಂದು ಹೇಳಿದ್ದಾರೆ.

Also Read  ಮಹಾಲಕ್ಷ್ಮೀ ಕೃಪೆ ಈ 4 ರಾಶಿಗಳಿಗೆ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

 

error: Content is protected !!
Scroll to Top