64ನೇ ಅಂಬೇಡ್ಕರ್ ಜನ್ಮದಿನ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ಇದರ ವತಿಯಿಂದ ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 07. ಡಾ.ಬಿ.ಆರ್ ಅಂಬೇಡ್ಕರ್ ಅವರ 64ನೆಯ ಪುಣ್ಯ ಸ್ಮರಣೆಯ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ಎ.ವಿ.ನಾಗೇಶ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಪುಟ್ಟ ವಾಲಗದಕೇರಿ ವಹಿಸಿದ್ದರು. ಶ್ರೀ ಸುರೇಶ್ ಪರ್ಕಳ ಬೌಧಿಕ್ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಸೋಮಶೇಖರ್ ನಾಯಕ್, ಹಿರಿಯ ಕಾರ್ಯಕರ್ತರಾದ ಬುಕ್ಷಿತ್ ನೀರ್ಪಾಡಿ, ಪದ್ಮಕುಮಾರ್ ಗುಂಡಡ್ಕ, ಅಜಿತ್ ರೈ ಕಡಬ, ರಕ್ಷಿತ್ ಪರಮಲೆ, ಕುಕ್ಕೆ ಸುಬ್ರಹ್ಮಣ್ಯ ಘಟಕದ ನಗರ ಕಾರ್ಯದರ್ಶಿಯಾದ ಇಲೈ ಅರಸ್.ಎಸ್, ಪುತ್ತೂರು ಜಿಲ್ಲಾ ಸಂಚಾಲಕರಾದ ಹಿತೇಶ್ ಕಟ್ರಮನೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಬಿಳಿನೆಲೆ: ವಿಶ್ವ ಯೋಗ ದಿನಾಚರಣೆ

 

error: Content is protected !!
Scroll to Top