ಮಂಗಳೂರು: ಟೆಸ್ಟ್ ಡ್ರೈವ್ ಗೆ ಕೊಂಡು ಹೋದ ಬೈಕ್‌ನೊಂದಿಗೆ ವ್ಯಕ್ತಿ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 05: ಬೈಕ್ ಖರೀದಿಗೆ ಬಂದು ಟೆಸ್ಟ್ ಡ್ರೈವ್ ಮಾಡುವುದಾಗಿ ಬೈಕ್‌ನೊಂದಿಗೆ ತೆರಳಿದಾತ ಬೈಕ್ ನೊಂದಿಗೆ ಪರಾರಿಯಾಗಿರುವ ಘಟನೆ ಇದೀಗಾ ಮಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಇಂತಹ ಪ್ರಕರಣ ಉಡುಪಿಯಲ್ಲಿ ನಡೆದಿತ್ತು.

ಅಳಕೆಯಲ್ಲಿರುವ ಕನ್ಸಲ್ಟೆಂಟ್ಸ್ ಸಂಸ್ಥೆಯೊಂದರ ಹಳೆ ದ್ವಿಚಕ್ರ ವಾಹನ ಮಾರಾಟ ಮಳಿಗೆಗೆ ಬಂದಿದ್ದ ಅಪರಿಚಿತನೋರ್ವ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ‌ ಎನ್ನಲಾಗಿದೆ. ಕನ್ಸಲ್ಟೆಂಟ್ಸ್ ಸಂಸ್ಥೆಯ ಗೋಡೌನ್ ಭೋಜರಾವ್ ಲೇನ್‌ನಲ್ಲಿದ್ದು, ಅಲ್ಲಿ ಗುರು ಪ್ರಸಾದ್ ಎಂಬ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು.ಇಲ್ಲಿಗೆ ಬಂದ ಅಪರಿಚಿತನೋರ್ವ ಬೈಕ್ ಖರೀದಿಸುವುದಾಗಿ ಹೇಳಿ ಮಾರಾಟಕ್ಕೆ ಇಟ್ಟಿದ್ದ ಕಪ್ಪು ಮತ್ತು ಕೆಂಪು ಸ್ಟಿಕ್ಕರ್‌ನ ಟಿವಿಎಸ್ ಸ್ಟಾರ್ ಸಿಟಿ ಬೈಕ್‌ನ್ನು ಟೆಸ್ಟ್ ಡ್ರೈವ್‌ ಮಾಡುವುದಾಗಿ ಅಂದಾಜು 45 ಸಾವಿರ ರೂ. ಮೌಲ್ಯದ ಬೈಕನ್ನು ಕೊಂಡೊಯ್ದಿದ್ದು, ಹಿಂದಿರುಗಿ ಬಂದಿಲ್ಲ ಎಂಬ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೋಟ್ಯಾಂತರ ರೂ. ಮರ ಕಳವು ಪ್ರಕರಣ | ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ದ ನೀತಿ ತಂಡ ಹೋರಾಟ

 

error: Content is protected !!
Scroll to Top