(ನ್ಯೂಸ್ ಕಡಬ) newskadaba.com ಕಡಬ, ಡಿ. 03: ದುರ್ಗಾಂಬ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಬಹುಮಾನ ಯೋಜನೆ ಲಕ್ಕಿ ಕೂಪನ್ ಡ್ರಾವನ್ನು ನಡೆಸಲಾಗಿದ್ದು, ವಿಜೇತರರಿಗೆ ಬಹುಮಾನ ವಿತರಿಸಲಾಗಿದೆ.
ಟೋಮ್ ಬಜಾರ್ ಮಾಲಕ ತೋಮ್ಸನ್ ಹಾಗೂ ಐಡಿಯಲ್ ಕಾಂಪ್ಲೆಕ್ಸ್ ಮಾಲಕ ಲಕ್ಷಣ ರೈ,ಸಿ,ಪಿ.ಸಿ.ಆರ್.ಸಿ.ನ ಆಧಿಕಾರಿ ಗೋಪಾಲಕೃಷ್ಣ ಅವರು ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ದುರ್ಗಾಂಬ ಮೊಬೈಲ್ ಸ್ಟೋರ್ ಮಾಲಕ ದಯಾನಂದ, ಪ್ರಮುಖರಾದ ಕಿಶನ್ ರೈ , ಬಜಾಜ್ ಅಟೋ ಶೋ ರೂಮ್ ಮಾಲಕ ಮಂಜುಶ್ರೀ ಅಲ್ಲದೇ ದುಗಾಂಬ ಮೊಬೈಲ್ ಸ್ಟೋರ್ ನ ಟೆಕ್ನಿಷನ್ ಶಿಬುಲಾಲ್, ವಿವೋ ಪ್ರಮೋಟರ್ ಸುನೀಲ್, ಏರ್ಟೆಲ್ ಪ್ರಮೋಟರ್ ಭರತ್, ಸ್ಯಾಮ್ಸಂಗ್ ಪ್ರಮೋಟರ್ ಮಾನಸ, ಎಕೌಂಟೆಂಟ್ ದೇವಿಕಾ ಮೊದಲಾದವರು ಉಪಸ್ಥಿತರಿದ್ದರು. ಪ್ರಥಮ ಡ್ರಾ ವಿಜೇತ ಕಾರ್ತಿಕ್ ಸುಬ್ರಹ್ಮಣ್ಯ ಅವರಿಗೆ ಎಂ.ಐ.ಟಿವಿ, ದ್ವಿತೀಯ ಡ್ರಾ ವಿಜೇತ ಪೂವರು ನೂಜಿಬಾಳ್ತಿಲ ಅವರಿಗೆ ಹೋಂ ಥಿಯೆಟರ್ ಅನ್ನು ನೀಡಲಾಯಿತು.