ಉಡುಪಿ: ಶ್ರೀಗಂಧ ದಾಸ್ತಾನು ಮಾಡಿಟ್ಟಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 02: ಆಟೋ ರಿಕ್ಷಾದಲ್ಲಿ ಶ್ರೀಗಂಧ ಮರದ ಕೊರಡುಗಳನ್ನು ದಾಸ್ತಾನು ಮಾಡಿಟ್ಟಿದ್ದ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ವಂಡ್ಸೆ ಗ್ರಾಮದ ಹಕ್ಲುಮನೆ ನಿವಾಸಿ ರಾಜೇಶ್(34) ಎಂದು ಗುರುತಿಸಲಾಗಿದೆ.

 

 

ಕುಂದಾಪುರದ ಅರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯಂತೆ ವಂಡ್ಸ್ ಗೆ ತೆರಳಿ ದಾಳಿ ನಡೆಸಿ ಅರಣ್ಯಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ 3.8 ಕೆ.ಜಿ ಶ್ರೀಗಂಧದ ಕೊರಡು ಸಮೇತ ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Also Read  ಜಾತಿನಿಂದನೆ ಆರೋಪದಡಿ ಬಿಜೆಪಿ ಶಾಸಕನ ವಿರುದ್ಧ FIR​ ದಾಖಲು..!

 

error: Content is protected !!