ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಉಡುಪಿ ಡಿ. 01: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಈ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಕಿರಿಯ ಮಗಳಿಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದ. ಹಿರಿಯ ಮಗಳು ಇದಕ್ಕೆ ವಿರೋಧಿಸಿದ್ದಳು. ನಂತರದಲ್ಲಿ ಪತ್ನಿ ಮೃತಳಾಗಿದ್ದು, ಆರೋಪಿ ಮಾತ್ರ ಈ ಚಾಳಿ ಬಿಟ್ಟಿರಲಿಲ್ಲ.

ತಂದೆಯೇ 14 ವರ್ಷದ ಮಗಳ ಮೇಲೆ ಲೈಂಗಿಕ ಹಲ್ಲೆ ನಡೆಸಿ, 16 ವರ್ಷದ ಹಿರಿಯ ಮಗಳಿಗೆ ಲೈಂಗಿಕ ದೌರ್ಜನ್ಯವೆಸಗಿದ್ದರ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದು, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.  ಒಟ್ಟು 26 ಮಂದಿ ಸಾಕ್ಷಿಗಳ ಪೈಕಿ ಸಂತ್ರಸ್ಥ ಸಹೋದರಿಯರು ಹಾಗೂ ದೂರುದಾರರು ಸೇರಿದಂತೆ 8 ಮಂದಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ತಂದೆ ನಡೆಸಿದ ಕೃತ್ಯ ಸಾಬೀತಾಗಿದೆ ಎಂದು ಆದೇಶಿಸಿದೆ.

ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಪೋಕ್ಸೋ ತಿದ್ದುಪಡಿ ಕಾಯ್ದೆ-2019 ರಂತೆ ಜೀವಮಾನ ಪರ್ಯಂತ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. 15,000 ದಂಡ ಕಟ್ಟದಿದ್ದಲ್ಲಿ 1 ವರ್ಷ ಹೆಚ್ಚುವರಿ ಜೈಲು, ಲೈಂಗಿಕ ಹಲ್ಲೆಗೆ 7 ವರ್ಷ ಕಠಿಣ ಜೈಲು ಶಿಕ್ಷೆ, ಕೊಲೆ ಬೆದರಿಕೆಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 1 ನೇ ನೊಂದ ಬಾಲಕಿಗೆ 5 ಲಕ್ಷ ಪರಿಹಾರ ನೀಡಬೇಕು. 2ನೇ ನೊಂದ ಬಾಲಕಿಗೆ 1.5 ಲಕ್ಷ ಪರಿಹಾರವನ್ನು ನೀಡುವಂತೆಯೂ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

error: Content is protected !!

Join the Group

Join WhatsApp Group