ರಾಜ್ಯದಲ್ಲಿಂದು 1,781 ಮಂದಿಗೆ ಕೊರೊನಾ, 17 ಮಂದಿ ಮೃತ್ಯು



(ನ್ಯೂಸ್ ಕಡಬ) newskadaba.com ಬೆಂಗಳೂರು . 21: ರಾಜ್ಯದಲ್ಲಿ ಇಂದು 1,781 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಇದೀಗಾ ಸೋಂಕಿತರ ಸಂಖ್ಯೆ 8,69,561ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಇಂದಿನ ವರದಿಯಂತೆ 24 ಗಂಟೆಯಲ್ಲಿ ರಾಜ್ಯದಲ್ಲಿ 17 ಮಂದಿ ಸೋಂಕಿಗೆ ಬಲಿಯಾಗುವುದರ ಮೂಲಕ ಒಟ್ಟಾರೆ ರಾಜ್ಯದಲ್ಲಿ ಸಾವಿನ ಸಂಖ್ಯೆ 11,621ಕ್ಕೆ ಏರಿಕೆಯಾಗಿದೆ.







 

2,181 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ರಾಜ್ಯದಲ್ಲಿ 8,33,169 ಮಂದಿ ಚೇತರಿಸಿಕೊಂಡಿದ್ದಾರೆ. 24,752 ಸಕ್ರಿಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 1,067 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,61,654ಕ್ಕೆ ಏರಿಕೆಯಾಗಿದೆ.






 

error: Content is protected !!
Scroll to Top