ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ➤ ನ.22 ರಂದು ಮಾಜಿ ಅಡ್ವೊಕೇಟ್ ಜನರಲ್ ಶ್ರೀ ಎ.ಎಸ್.ಪೊನ್ನಣ್ಣರವರು ಭೇಟಿ

(ನ್ಯೂಸ್ ಕಡಬ) newskadaba.com ಗೂನಡ್ಕ . 21: ನ. 22 ರಂದು  ನಾಳೆ (ಭಾನುವಾರ) ದಂದು ಅಪರಾಹ್ನ 3:30 ಕ್ಕೆ ಸಂಪಾಜೆ ಗ್ರಾಮದ ಗೂನಡ್ಕಕ್ಕೆ ಕೆ.ಪಿ.ಸಿ.ಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷ ರಾದ ಕರ್ನಾಟಕ ಸರ್ಕಾರ ದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ರವರು ಭೇಟಿ ನೀಡಲಿದ್ದಾರೆ.

 

 

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಕೊಯಂಗಾಜೆಯವರ ಅಧ್ಯಕ್ಷತೆ ಸಭೆ ನಡೆಯಲಿದೆ .ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್,ಕೆಪಿಸಿಸಿ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ,ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ,ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಜಿ.ಕೆ.ಹಮೀದ್,ಸಂಪಾಜೆ ಮಹಿಳಾ ಘಟಕದ ಅಧ್ಯಕ್ಷೆ ಮೋಹಿನಿ ಪೇಲ್ತಡ್ಕ ,ದಿನಕರ ಸಣ್ಣಮನೆ,ಅಬೂಸಾಲಿ ಗೂನಡ್ಕ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.

Also Read  ಮೊಬೈಲ್ ನಂಬರ್ ಚೀಟಿಯಲ್ಲಿ ಬರೆದು, ಕಣ್ಸನ್ನೆ ಮಾಡಿದ ಯುವಕ ➤ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Xl

error: Content is protected !!
Scroll to Top