ಕಡಬ: ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ವಾಹನ ಜಾಥಾ

(ನ್ಯೂಸ್ ಕಡಬ) newskadaba.com ಕಡಬ . 19: ಕಸ್ತೂರಿ ರಂಗನ್‌ ವರದಿ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಬಲ್ಯ ಗ್ರಾಮವನ್ನು ಕೈಬಿಡಬೇಕೆಂದು ಅಗ್ರಹಿಸಿ ಗ್ರಾಮಸ್ಥರು ವಾಹನ ಜಾಥಾದೊಂದಿಗೆ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿಗೆ ಕಳೆದ ದಿನ ಆಗಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ಯೋಜನೆಯನ್ನು ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಯಿತು.

ಮಲೆನಾಡು ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆದು ಗ್ರಾ.ಪಂ. ಆಡಳಿತಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಧನಂಜಯ ಗೌಡ ಕೊಡಂಗೆ, ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌, ಕುಟ್ರುಪ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ ಮತ್ತಿತರರು ಮಾತನಾಡಿ, ಕಸ್ತೂರಿ ರಂಗನ್‌ ವರದಿಯ ಪ್ರಕಾರ ದ.ಕ ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ, ತಾಲೂಕಿನ 46 ಗ್ರಾಮಗಳು ಪಶ್ಚಿಮ ಘಟ್ಟ ಅತಿ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ಈ ಭಾಗದ ಜನರು ತಲತಲಾಂತರದಿಂದ ತಮ್ಮ ಜೀವನಾಡಿಯಾದ ಕೃಷಿಯನ್ನು ಕುಲಕಸುಬನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Also Read  ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ

ಯೋಜನೆ ಜಾರಿಯಾದರೆ ರೈತರ ಜೀವನ ಬೀದಿಪಾಲಾಗಲಿದೆ. ಇದರಲ್ಲಿ ಬಲ್ಯ ಗ್ರಾಮ ಕೂಡ ಒಳಪಟ್ಟಿದ್ದು ಈ ಹಿನ್ನೆಯಲ್ಲಿ ಬಲ್ಯ ಗ್ರಾಮದ ಜನ ಈಗ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಭಾವ್ಯ ಸಂತ್ರಸ್ತ ಗ್ರಾಮಗಳಲ್ಲಿ ಹೋರಾಟ ಆಯೋಜಿಸಿ ಬಳಿಕ ಕಡಬದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

Also Read  ಅಂತರರಾಜ್ಯ ಸಂಚಾರಕ್ಕೆ ದಕ್ಷಿಣ ಕನ್ನಡ - ಕೇರಳ ಗಡಿ ಓಪನ್

error: Content is protected !!
Scroll to Top