ಮಂಗಳೂರು- ಕಾಸರಗೋಡು ನಡುವೆ ಬಸ್ ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು . 17: ಮಂಗಳೂರು: ಕೋವಿಡ್ ಕಾರಣದಿಂದಾಗಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕಾಸರಗೋಡು ಬಸ್ ಸಂಚಾರ ಸೋಮವಾರದಿಂದ ಮತ್ತೆ ಆರಂಭಗೊಂಡಿದೆ. ಮಂಗಳೂರು ಕೇಂದ್ರ ನಿಲ್ದಾಣದಿಂದ ಒಟ್ಟು 24 ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳು ಓಡಾಟ ಅರಂಭಿಸಿದೆ.

 

ಈ ಹಿಂದೆ ಕರ್ನಾಟಕದಿಂದ ಕಾಸರಗೋಡಿಗೆ ಬಸ್ ಸಂಚಾರಿಸಲು ಯಾವುದೇ ನಿರ್ಬಂಧವಿಲ್ಲದ್ದಿದ್ದರೂ ಕೋವಿಡ್ ಸಂದರ್ಭದಲ್ಲಿ ಕೇರಳ ಸರಕಾರ ಅನುಮತಿ ನಿರಾಕರಿಸಿತ್ತು. ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿತ್ತು.ಇದೀಗ ಕೇರಳ ಸರಕಾರ ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಅಂತರ್ ರಾಜ್ಯಗಳ ನಡುವೆ ಬಸ್ಸುಗಳ ಓಡಾಟ ಆರಂಭಗೊಂಡಿದೆ.

Also Read  ಸಬ್ ಇನ್ಸ್ ಪೆಕ್ಟರ್ ಮಗಳ ಶವ ಸೂಟ್ಕೇಸಲ್ಲಿ ಪತ್ತೆ ►ಹತ್ಯೆ ಮಾಡಿದವರು ಯಾರು ಗೊತ್ತೆ...???

 

error: Content is protected !!
Scroll to Top