ಬಂದರಿನಲ್ಲಿ ಮೀನುಗಾರರ ಮಧ್ಯೆ ಗಲಾಟೆ ➤ ಪೊಲೀಸರಿಂದ ಲಾಠಿ ಚಾರ್ಜ್..!

(ನ್ಯೂಸ್ ಕಡಬ) newskadaba.com ಉಡುಪಿ, .8: ಉಡುಪಿ ಜಿಲ್ಲೆಯ ಬೈಂದೂರು ಕೊಡೇರಿ ಬಂದರಿನಲ್ಲಿ ಮೀನು ಹರಾಜು ವಿಷಯದಲ್ಲಿ ಮೀನುಗಾರರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.

 

ಮೀನು ಹರಾಜು ಬೇಡ ಕಾಮಗಾರಿ ಪೂರ್ಣಗೊಳಿಸಿ ಹರಾಜುಮಾಡಿ ಅನ್ನೊದು ಒಂದು ತಂಡದ ವಾದ ಮಾಡುತ್ತಿದ್ದ ಸಂದರ್ಭ ಮತ್ತೊಂದು ತಂಡ ಮೀನು ಹರಾಜಿಗೆ ಮುಂದಾಗಿತ್ತು. ಇದರಿಂದ ಸ್ಥಳೀಯ ಮತ್ತು ಆಸುಪಾಸಿನ ಮೀನುಗಾರರ ನಡುವೆ ಗದ್ದಲ ಏರ್ಪಟ್ಟು ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಪರಿಸ್ಥಿತಿ ಕೈ ಮೀರಿದ ಕಾರಣ ಪರಿಸರದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿ ಹತೋಟಿಗೆ ತಂದಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಬೀಡು ಬಿಟ್ಟುದ್ದು ಕೆ ಎಸ್ ಆರ್ ಪಿ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Also Read  ಹಾಸನ: ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯ ► ಇಬ್ಬರು ಮಕ್ಕಳೊಂದಿಗೆ ಪೊಲೀಸರಿಗೆ ಶರಣಾದ ಪತಿ

 

 

error: Content is protected !!