(ನ್ಯೂಸ್ ಕಡಬ) newskadaba.com ಕಡಬ, ಅ.03. ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಅಕ್ಟೋಬರ್ 05 ರಂದು ಆಲಂಕಾರು ರೈತ ಭವನದಲ್ಲಿ ನಡೆಯಲಿರುವ ಬೃಹತ್ ಸಮರ್ಥನಾ ಸಮಾವೇಶದ ಪೂರ್ವ ಭಾವಿ ಸಭೆಯು ಮರ್ಧಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕೃಷ್ಣ ಶೆಟ್ಟಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಸುಳ್ಯ ಮಂಡಲದ ಉಪಾಧ್ಯಕ್ಷರಾದ ಪುಲಸ್ತ್ಯಾ ರೈ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಧಾನ ಕಾಯದರ್ಶಿ ಪ್ರಕಾಶ್ ಎನ್.ಕೆ., ಸಿ.ಎ. ಬ್ಯಾಂಕ್ ಕಡಬ ಇದರ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಎ.ಬಿ. ಮನೋಹರ್ ರೈ, ಬಿಳಿನೆಲೆ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಬಾಲಕೃಷ್ಣ ವಾಲ್ತಾಜೆ, ಪ್ರಮುಖರಾದ ಗಿರೀಶ್ ಎ.ಪಿ., ಸತೀಶ್ ನಾಯ್ಕ್, ಫಯಾಜ್ ಕೆನರಾ, ಶಿವಪ್ರಸಾದ್ ಮೈಲೇರಿ, ಉಮೇಶ್ ಶೆಟ್ಟಿ ಸಾಯಿರಾಮ್, ಮಧುಸೂದನ್ ಕೊಂಬಾರ್ ಮೊದಲಾದವರು ಉಪಸ್ಥಿತರಿದ್ದರು.