(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಇಲ್ಲಿನ ಮುಖ್ಯರಸ್ತೆಯ ಗಾಂಧಿನಗರದಲ್ಲಿರುವ ಜೆ.ಜೆ. ಕಾಂಪ್ಲೆಕ್ಸ್ನ ಮಹಡಿಯಿಂದ ಯುವಕನೊಬ್ಬ ಕೆಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ.
ಮೃತ ಯುವಕನನ್ನು ಕೋಲ್ಚಾರಿನ ಯತೀಶ್ ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಈ ಕಟ್ಟಡದಲ್ಲಿ ಬಾಡಿಗೆ ಕೊಟ್ಟಡಿಯಲ್ಲಿದ್ದು, ಘಟನೆಯ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಎನ್ನಲಾಗಿದೆ. ಇದರಿಂದಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.