ಕಾಪು : ಸೋಲಾರ್ ಬ್ಯಾಟರಿ ಕಳವು ಆರೋಪಿಯ ಅರೇಸ್ಟ್

(ನ್ಯೂಸ್ ಕಡಬ) newskadaba.com ಕಾಪು . 30: ಉಡುಪಿಯಲ್ಲಿ ಬೆಳಪು ಗ್ರಾಮ ಪಂಚಾಯತ್ ದಾರಿ ದೀಪಕ್ಕಾಗಿ ಸೋಲಾರ್ ದೀಪಗಳನ್ನು ಅಳವಡಿಸಿದ ಬ್ಯಾಟರಿ ಕಳವು ಮಾಡುತ್ತಿದ್ದಾತನನ್ನು ಸ್ಥಳಿಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಕಳತ್ತೂರು ನಿವಾಸಿ ಕಿರಣ್ ಬಂಧಿತ ಆರೋಪಿಯಾಗಿದ್ದಾನೆ.

ದಾರಿ ದೀಪಕ್ಕಾಗಿ ಹಾಕಲಾಗಿದ್ದ ಸೋಲಾರ್ ಗೆ ಅಳವಡಿಸಲಾದ ಬ್ಯಾಟರಿಗಳು ಪ್ರತಿನಿತ್ಯ ಕಳವಾಗುತ್ತಿತ್ತು. ಇದು ಪಂಚಾಯತ್‍ಗೆ ತಲೆನೋವಾಗಿ ಪರಿಣಾಮಿಸಿತ್ತು. ಇದರಿಂದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಕಳ್ಳರ ಪತ್ತೆಗಾಗಿ ಸ್ಥಳಿಯ ತಂಡವನ್ನು ರಚಿಸಿದ್ದರು. ಇಂದು ಮುಂಜಾನೆ(ಶುಕ್ರವಾರ) ಬ್ಯಾಟರಿಗಳ ಕಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದತನನ್ನು ಸ್ಥಳಿಯರು ತಡೆದು ವಿಚಾರಿಸಿದಾಗ ಕಳ್ಳನದ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳನ್ನನ್ನು ಬಂಧಿಸಿ  ಶಿರ್ವ ಪೊಲೀಸರಿಗೆ  ಒಪ್ಪಿಸಲಾಗಿದೆ.

Also Read  ಬ್ಯಾಟ್ ಹಿಡಿಯುವ ಕೈಯಲ್ಲಿ ಪೊರಕೆ.!! ► ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ ಈತ ಯಾರು ಅಂತಿರಾ.??

 

error: Content is protected !!
Scroll to Top