ತೋಟದಲ್ಲೇ ಬಾಕಿಯಾದ 2 ತಿಂಗಳ ಆನೆಮರಿ ➤ ಆನೆ ನೋಡಲು ತೋಟದತ್ತ ಜನ ದೌಡು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 30: ಕಾಡಿನಿಂದ ನಾಡಿಗೆ ಆಹಾರ ಅರಸುತ್ತ ತೋಟಕ್ಕೆ ನುಗ್ಗಿದ ಆನೆಗಳ ಹಿಂಡೊಂದರ ಆನೆಮರಿ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ಶುಕ್ರವಾರ ಬೆಳಿಗ್ಗೆ ಕಂಡುಬಂದಿದೆ. ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ಸಂಪೂರ್ಣ ನಾಶ ಮಾಡಿದೆ.

 

ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಉಳಿದಿದೆ ಎಂದು ತಿಳಿದು ಬಂದಿದೆ.ಬೆಳಗ್ಗೆ ತೋಟದ ಮಾಲಕರು ಹೋದಾಗ ವಿಷಯ ತಿಳಿದು ಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿದು ಸ್ಥಳೀಯರು ಆನೆ ಮರಿಯನ್ನು ನೋಡಲು ಆಗಮಿಸುತ್ತಲೇಯಿದ್ದಾರೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಹಾಗೂ 2 ತಿಂಗಳ ಆನೆ ಮರಿಯಾಗಿದ್ದು, ಆನೆಗಳ ಹಿಂಡು ಬಂದು ಮತ್ತೆ ಕರೆದೊಯ್ಯುವ ಸಾಧ್ಯತೆ ಇರುವುದರಿಂದ ಸ್ಥಳಕ್ಕೆ ಯಾರನ್ನೂ ತೆರಳದಂತೆ ಅರಣ್ಯ ಇಲಾಖೆ  ಸ್ಥಳೀಯರಿಗೆ ಸೂಚನೆ ನೀಡಿದ್ದಾರೆ.

Also Read  ಪುತ್ತೂರು: ಸ್ಕೂಟರ್ ಹಾಗೂ ಮಹೀಂದ್ರಾ ಟೆಂಪೋ ನಡುವೆ ಢಿಕ್ಕಿ ➤ ಸವಾನಿಗೆ ಗಾಯ

error: Content is protected !!
Scroll to Top