ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ..!!

(ನ್ಯೂಸ್ ಕಡಬ) newskadaba.com ಫಿಲಿಫೈನ್ಸ್ . 28: ಅಕ್ರಮ ಕೋಳಿ ಜಗಳ ಸ್ಪರ್ಧೆಯ ವಿರುದ್ಧದ ಕಾರ್ಯಾಚರಣೆ ವೇಳೆ ಕೋಳಿಯೊಂದು ಪೊಲೀಸ್​ ಅಧಿಕಾರಿಯನ್ನು ಕೊಲೆ ಮಾಡಿರುವ ಘಟನೆ ಫಿಲಿಫೈನ್ಸ್​ನಲ್ಲಿ ನಡೆದಿದೆ.

ಅಕ್ರಮ ಕೋಳಿ ಅಂಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂಬ ಮಾಹಿತಿ ತಿಳಿದು ದಾಳಿ ಮಾಡಲು ತೆರಳಿದಿದ್ದಾಗ ಕೋಳಿ ಬ್ಲೇಡ್​ ದಾಳಿಗೆ ಲೆಫ್ಟಿನೆಂಟ್​ ಕ್ರಿಶ್ಚಿಯನ್​ ಮೃತಪಟ್ಟಿದ್ದಾರೆ.ಘಟನೆಯಲ್ಲಿನ ತಿರುವಿಗೆ ಕೋಳಿಯ ಕಾಲಿನಲ್ಲಿದ್ದ ಹರಿತವಾದ ಬ್ಲೇಡ್​ ಕಾರಣವಾಗಿದೆ. ಕೋಳಿ ಜಗಳದ ವೇಳೆ ಕಟ್ಟಲಾಗುವ ಬ್ಲೇಡ್​ನಿಂದಲೇ ಅಧಿಕಾರಿಯ ಪ್ರಾಣಹೋಗಿದೆ.  ಎಡಭಾಗದ ಕಾಲಿನ ತೊಡೆಯ ನಾಡಿಯಲ್ಲಿ ಬ್ಲೇಡ್​ ಸಿಲುಕಿಕೊಂಡಿತ್ತು. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ತಿಳಿದು ಬಂದಿದೆ

Also Read  ಮೊಮ್ಮಗಳ ಶಿಕ್ಷಣಕ್ಕಾಗಿ ಮನೆಯನ್ನೇ ಮಾರಿದ ವೃದ್ದ ಚಾಲಕನಿಗೆ ಹರಿದು ಬಂತು 24 ಲಕ್ಷ ರೂ. ದೇಣಿಗೆ

error: Content is protected !!
Scroll to Top